ಪ್ರಧಾನಿ ನರೇಂದ್ರ ಮೋದಿ(Narendra Modi) ಹೋದ ಕಡೆಯಲ್ಲಾ ಅವರದ್ದೇ ಹವಾ. ಯಾಕಂದರೆ ಮೋದಿ ಕಂಡರೆ ಎಲ್ಲರಿಗೆ ಅಚ್ಚುಮೆಚ್ಚು. ಪುಟ್ಟ ಪುಟ್ಟ ಮಕ್ಕಳಿಂದ, ವಯಸ್ಸಾದ ಅಜ್ಜ, ಅಜ್ಜಿ ಕೂಡು ಮೋದಿ ಅಂದರೆ ಇಷ್ಟ ಪಡುತ್ತಾರೆ. ವಿಶ್ವ(World)ದಲ್ಲೇ ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ನಾಯಕ(Popular Leader) ಸದ್ಯ ಪ್ರಧಾನಿ ಮೋದಿ ಯುಕೆ(UK) ಪ್ರವಾಸದಲ್ಲಿ ಇದ್ದರು. ಗಾಸ್ಗೋದಲ್ಲಿ ನಡೆದಲ್ಲಿ ಕೋಪ್ 26 ಶೃಂಗಸಭೆ(COP26 Summit)ಯಲ್ಲಿ ಮೋದಿ ಭಾಗಿಯಾಗಿದ್ದರು. ಸಮಾವೇಶ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಇದೆ ವೇಳೆ ಇಸ್ರೇಲ್ ಪ್ರಧಾನಿ(Israel Prime Minister), ಮೋದಿಗೆ ಕೇಳಿದ ಒಂದು ಪ್ರಶ್ನೆಯ ವಿಡಿಯೋವೊಂದು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಇಸ್ರೇಲ್ ಪ್ರಧಾನಿ ನಫ್ತಾಲಿ(Naftali Bennett) ಬೆನ್ನೆಟ್ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ನಗೆಗಡಲಲ್ಲಿ ತೇಲಾಡಿದ್ದಾರೆ. ಇಸ್ರೇಲ್ ಪ್ರಧಾನಿ ನೀಡಿದ ಬಿಗ್ ಆಫರ್ ಮಾತುಕತೆ ಭಾರಿ ಸಂಚಲನ ಸೃಷ್ಟಿಸಿದೆ.
ನಮ್ಮ ಪಕ್ಷಕ್ಕೆ ಬನ್ನಿ ಎಂದು ಮೋದಿಗೆ ಆಫರ್!
ದ್ವಿಪಕ್ಷೀಯ ಮಾತುಕತೆಗೆ ಮುನ್ನ ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಒಬ್ಬರನ್ನೊಬ್ಬರು ಆತ್ಮೀಯವಾಗಿ ಸ್ವಾಗತಿಸಿದರು. ಒಬ್ಬೊರಿಗೊಬ್ಬರು ಶೇಕ್ ಹ್ಯಾಂಡ್ ಮಾಡಿದರು. ಈ ವೇಳೆ, ನೀವು ಇಸ್ರೇಲ್ನಲ್ಲಿ ಸಖತ್ ಫೇಮಸ್ ವ್ಯಕ್ತಿ . ನೀವು ಇಸ್ರೇಲ್ಗೆ ಬಂದು ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಮೋದಿಯನ್ನು ಕೇಳಿದ್ದಾರೆ. ನಫ್ತಾಲಿ ಬೆನ್ನೆಟ್ ಮಾತು ಕೇಳಿದ ಮೋದಿಗೆ ನಗು ತಡೆಯಲು ಆಗಲಿಲ್ಲ. ಬೆನ್ನೆಟ್ ಹಾಗೂ ಮೋದಿ ಇಬ್ಬರು ನಗೆಗಡಲಲ್ಲಿ ತೇಲಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಭಾರಿ ಚರ್ಚೆ ಹುಟ್ಟುಹಾಕಿದೆ.