
ನಂಜನಗೂಡು: ನ.18 ರಿಂದ ತಾಲ್ಲೂಕಿನಲ್ಲಿ ಪೌತಿ ಖಾತೆ ಆಂದೋಲನವನ್ನು ನಡೆಸಲಾಗುತ್ತದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದರು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಳಿಗೆರೆ ಹೋಬಳಿಯಲ್ಲಿ 18-11-2024 ಮತ್ತು 22-11-2024, ಹುಲ್ಲಹಳ್ಳಿ ಹೋಬಳಿಯಲ್ಲಿ 25-11-2024 ಮತ್ತು 30-11-2024 , ಚಿಕ್ಕಯ್ಯನಛತ್ರ ಹೋಬಳಿಯಲ್ಲಿ 02-12-2024 ಮತ್ತು 06-12-2024, ಕಸಬಾ ಹೋಬಳಿಯಲ್ಲಿ 04-12-2024 ಮತ್ತು 09-12-2024 ಹಾಗೂ ದೊಡ್ಡ ಕವಲಂದೆ ಹೋಬಳಿಯಲ್ಲಿ 11-12-2024 ಮತ್ತು 16-12-2024 ರಂದು ನಂಜನಗೂಡು ತಾಲ್ಲೂಕಿನ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಪೌತಿ ಖಾತೆ ಆಂದೋಲನವನ್ನು ನಡೆಸಲಾಗುತ್ತದೆ.
ಸುಮಾರು ವರ್ಷಗಳಿಂದ ಕೆಲವು ಜಮೀನಿನ ಖಾತೆದಾರರು ನಿಧನ ಹೊಂದಿದ್ದರೂ ಸಹ ವಾರಸುದಾರರಿಗೆ ಖಾತೆಯಾಗದೇ ಇರುವುದರಿಂದ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನ ಈ ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮನವಿ ಮಾಡಿದ್ದಾರೆ.