ಮೈಸೂರು: ಹಾನಗಲ್, ಸಿಂಧಗಿ ಉಪ ಚುನಾವಣಾ (by election) ಪ್ರಚಾರ ಕಣದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಧ್ಯೆ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇಂದೂ ಕೂಡ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್(zameer ahmed khan) ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅಂಡ್ ಟೀಂ ಸಿಂಧಗಿಯಲ್ಲಿ ಕುಳಿತೊರೋದೆ ಜೆಡಿಎಸ್(JDS)ನ ಸೋಲಿಸಿ ಬಿಜೆಪಿ(BJP)ಯನ್ನ ಗೆಲ್ಲಿಸಲು ಎಂದು ಎಚ್ಡಿಕೆ ಆರೋಪಿಸಿದರು. ಸಿಂಧಗಿಯಲ್ಲಿ ಸ್ಪರ್ಧೆ ಇರೋದೆ ಜೆಡಿಎಸ್-ಬಿಜೆಪಿ ನಡುವೆ, ಕಾಂಗ್ರೆಸ್ನವರು ಅಲ್ಲಿ ಯಾಕೆ ಬೀಡು ಬಿಟ್ಟಿದ್ದಾರೆ. ಅವರ ಉದ್ದೇಶ ಜೆಡಿಎಸ್ ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸುವುದು ಎಂದು ಇಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಅವರ ಫಾರಂಹೌಸ್ನಲ್ಲಿ ಅವರೇನು ಬಿತ್ತಿದ್ದಾರೆ?
ಸಿದ್ದರಾಮಯ್ಯ ಪ್ರತಿ ಸಭೆಯಲ್ಲೂ ನನ್ನ ವಿರುದ್ಧ ಹೊಲ ಉಳುಮೆ ಮಾಡಿದ್ದಾನಾ ಎಂದು ಪ್ರಶ್ನಿಸುತ್ತಾರೆ. ನಿಜವಾದ ರೈತ ನಾನು, ನಾವು ಕುರಿ ಮಂದೆಯ ನಡುವೆ ಊಟ ಮಾಡಿ ಮಲಗಿದ್ದೇನೆ. ನಾನು ಕೃಷಿಕನೋ ಅಲ್ಲವೋ ಅಂತ ಬಿಡದಿ ತೋಟಕ್ಕೆ ಬಂದು ನೋಡಲಿ ಎಂದು ಸವಾಲೆಸೆದರು. ಆದ್ರೆ ಸಿದ್ದರಾಮಯ್ಯ ಎಲ್ಲಿ ಹೊಲ ಉಳುಮೆ ಮಾಡಿದ್ದಾರೆ.ಅವರದ್ದು ಒಂದು ಫಾರಂ ಹೌಸ್ ಇದ್ಯಲ್ಲ, ಏನ್ ಬಿತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಜಾತಿ ಜಾತಿಗಳನ್ನೇ ಒಡೆದರು
ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ, ಜಾತಿ ಜಾತಿಗಳನ್ನೇ ಒಡೆದರು. ಸಿಂಧಗಿ, ಹಾನಗಲ್ನಲ್ಲಿ ಜಾತಿವಾರು ಸಭೆಗಳನ್ನ ಮಾಡ್ತಿದ್ದಾರೆ. ಜಾತ್ಯಾತೀತವಾಗಿದ್ರೆ ಇವರು ಜಾತಿವಾರು ಸಭೆ ಯಾಕೆ ನಡೆಸುತ್ತಿದ್ದರು. ಇವರೆಂಥಾ ಜಾತ್ಯಾತೀತ ವಾದಿಗಳು ಎಂದು ವಾಗ್ದಾಳಿ ನಡೆಸಿದರು.