ರಾಜ್ಯಸುದ್ದಿ

ದೀಪಾವಳಿ ಲಕ್ಷ್ಮೀ ಪೂಜೆಯ ವಿಧಿ-ವಿಧಾನ ಹೀಗಿದೆ..!

ಬೆಳಕಿನ ಹಬ್ಬ ದೀಪಾವಳಿ(Deepavali) ಬಹುತೇಕ ಬಂದಿದೆ. ಮನೆಗಳು ದೀಪಗಳಿಂದ ಮತ್ತು ಜನರ ಮುಖಗಳು ಸಂತೋಷದಿಂದ ತುಂಬಿವೆ. ದೀಪಾವಳಿಯನ್ನು ಆಚರಿಸುವ ಪ್ರಮುಖ ಮುಖ್ಯಾಂಶವೆಂದರೆ ಸಾಮಾನ್ಯ ಜನರ ಮನೆಗಳಿಗೆ ಸಮೃದ್ಧಿ ಮತ್ತು ಸಂತೋಷವನ್ನು ಆಹ್ವಾನಿಸುವುದು. ದೇಶದ ಅನೇಕ ಭಾಗಗಳಲ್ಲಿ ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು(Lakshmi Pooja) ಸಹ ಮಾಡಲಾಗುತ್ತದೆ. ಲಕ್ಷ್ಮಿಯು ಸಂಪತ್ತಿನ ಅಧಿದೇವತೆಯಾಗಿದ್ದು, ಮನೆಗಳಿಗೆ ಸಮೃದ್ಧಿ, ಸಂಪತ್ತು ಮತ್ತು ಸದ್ಭಾವನೆಯನ್ನು ಆಹ್ವಾನಿಸಲು ಪೂಜೆಯನ್ನು ಮಾಡಲಾಗುತ್ತದೆ.ಈ ದೀಪಾವಳಿಯಂದು ನೀವು ಮನೆಯಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಲು ಯೋಚನೆ ಮಾಡುತ್ತಿದ್ದರೆ ಅದನ್ನು  ಹೇಗೆ ಮಾಡಬೆಕು ಎಂಬುದು ಇಲ್ಲಿದೆ.  

ಪೂಜೆಯ ತಯಾರಿ –

ಪೂಜೆಯನ್ನು ಪ್ರಾರಂಭಿಸುವ ಮೊದಲು, ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಅದನ್ನು ಅಲಂಕರಿಸುವುದು ಅವಶ್ಯಕ. ಕೆಲವು ಕಡೆ ಶುಧ್ಧೀಕರಣದ ಸಲುವಾಗಿ ಮನೆಗೆ ಮತ್ತು ಮನೆಯ ಕುಟುಂಬದ ಸದಸ್ಯರ ಮೇಲೆ ಸಹ ಗಂಗಾ ಜಲವನ್ನು ಸಿಂಪಡಿಸಲಾಗುತ್ತದೆ. ಮನೆಯನ್ನು ಸ್ವಚ್ಛ ಮಾಡುವುದರಿಂದ ಮನೆಯಲ್ಲಿರುವ ದುಷ್ಟ ಶಕ್ತಿಗಳು ಹೋಗಿ, ತಾಯಿ ಲಕ್ಷ್ಮೀಯು ಬಂದು ನೆಲೆಸಿ ಹರಸುತ್ತಾಳೆ ಎಂಬ ನಂಬಿಕೆ ಇದೆ.

 ಪೂಜಾ  ಮಂಟಪವನ್ನು ಸ್ಥಾಪಿಸಿ

ಪೂಜೆಯನ್ನು ನಡೆಸಬೇಕಾದ ಮಂಟಪವನ್ನು ಸ್ಥಾಪಿಸುವುದು ಬಹಳ ಮುಖ್ಯವಾಗುತ್ತದೆ.  ನೀವು ದೇವರ ಮುಂದೆ ಮಂಟಪವನ್ನು ಸ್ಥಾಪನೆ ಮಾಡಿ, ನಂತರ ವೇದಿಕೆಯ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಅದರ ಮೇಲೆ ಕೆಲವು ಧಾನ್ಯಗಳನ್ನು ಹಾಕಿ.ಅದರ ಮೇಲೆ ಅರಿಶಿನ ಪುಡಿಯಿಂದ ಕಮಲವನ್ನು ಬಿಡಿಸಿ ಮತ್ತು ಅದರ ಮೇಲೆ ಲಕ್ಷ್ಮಿ ಮತ್ತು ಗಣೇಶನ ಚಿತ್ರ ಅಥವಾ ವಿಗ್ರಹವನ್ನು ಇರಿಸಿ.

ಕಲಶವನ್ನು ಸ್ಥಾಪಿಸಿ 

ಒಂದು ತಾಮ್ರದ ಪಾತ್ರೆಯಲ್ಲಿ ಅಥವಾ ಜೊಂಬಿನಲ್ಲಿ ಮುಕ್ಕಾಲು ಭಾಗದಷ್ಟು ನೀರನ್ನು ತುಂಬಿಸಿ ಮತ್ತು ಅದರೊಳಗೆ ನಾಣ್ಯಗಳು, ವೀಳ್ಯದೆಲೆ, ಒಣದ್ರಾಕ್ಷಿ, ಲವಂಗ, ಒಣ ಹಣ್ಣುಗಳು ಮತ್ತು ಏಲಕ್ಕಿಯನ್ನು ಹಾಕಿ.  ಆ ಪಾತ್ರೆಯ ಮೇಲೆ ವೃತ್ತಾಕಾರದಲ್ಲಿ ಮಾವಿನ ಎಲೆಗಳನ್ನು ಇರಿಸಿ ಮತ್ತು ಅದರ ಮಧ್ಯದಲ್ಲಿ ತೆಂಗಿನಕಾಯಿಯನ್ನು ಇಡಬೇಕು. ಹೀಗೆ ಮಾಡಿದರೆ ಕಲಶ ಸಿದ್ಧವಾಗುತ್ತದೆ. ಈ  ಕಲಶವನ್ನು ಪೂಜಾ ಪೀಠದ ಮೇಲೆ ಇರಿಸಿ ಮತ್ತು ಅದನ್ನು ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ.

ಮುಹೂರ್ತ: 2021 ರ ನವೆಂಬರ್ 4 ರಂದು ಗುರುವಾರ ಬೆಳಿಗ್ಗೆ 6:9 ರಿಂದ 8:20 ರವರೆಗೆ.

ಪೂಜಾ ಅವಧಿ: 1 ಗಂಟೆ 55 ನಿಮಿಷಗಳು

ಪ್ರದೋಷ ಕಾಲ: 5:34 ರಿಂದ 8:10 ರವರೆಗೆ

ವಿಗ್ರಹಗಳಿಗೆ ಪವಿತ್ರ ಸ್ನಾನ – ವಿಗ್ರಹಗಳನ್ನು ಶುದ್ಧ ನೀರು, ಪಂಚಾಮೃತ, ಗಂಧದ ನೀರು ಮತ್ತು ಪನ್ನೀರುಗಳಿಂದ ತೊಳೆಯಬೇಕು. ನಂತರ ಅವುಗಳನ್ನು ಅರಿಶಿನ ಪುಡಿ, ಗಂಧ ಮತ್ತು ಕುಂಕುಮದಿಂದ ಅಲಂಕರಿಸಬೇಕು. ಅದರ ನಂತರ ಮೂರ್ತಿಗಳ ಸುತ್ತಲೂ ಹೂವುಗಳನ್ನು ಹಾಕಿ ದೇವಿಯನ್ನು ಆರಾಧಿಸಬೇಕು.

ಲಕ್ಷ್ಮಿ ಪೂಜೆಯು ಗಣೇಶನಿಗೆ ನೈವೇದ್ಯ ಮಾಡಿ ನಂತರ ಲಕ್ಷ್ಮಿಗೆ ಮಾಡುವ ಮೂಲಕ ಆರಂಭವಾಗುತ್ತದೆ. ನೈವೇದ್ಯಗಳಲ್ಲಿ ಸಾಮಾನ್ಯವಾಗಿ ಬಾದಶ, ಲಡ್ಡೂಗಳು, ವೀಳ್ಯದೆಲೆ ಮತ್ತು ಬೀಜಗಳು, ಹಣ್ಣುಗಳು, ತೆಂಗಿನಕಾಯಿ, ಸಿಹಿತಿಂಡಿಗಳು, ಮನೆಯ ಅಡುಗೆಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳು ಮತ್ತು ಕೆಲವು ನಾಣ್ಯಗಳನ್ನು ಇಡಲಾಗುತ್ತದೆ. ಮಂತ್ರವನ್ನು  ಹೇಳುವಾಗ ದೀಪಗಳು ಮತ್ತು ಅಗರಬತ್ತಿಗಳನ್ನು ಬೆಳಗಿಸಲಾಗುತ್ತದೆ ಮತ್ತು ಹೂವುಗಳನ್ನು  ಹಾಕಿ ತಾಯಿಯ ಆಶೀರ್ವಾದವನ್ನು ಬೇಡಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button