ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ತುರವಿಹಾಳ ಪಟ್ಟಣಕ್ಕೆ ಫೆ.23ಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ

ಮಸ್ಕಿ: ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.23ಕ್ಕೆ ತುರವಿಹಾಳ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಆರ್.ಬಸನಗೌಡ ತುರವಿಹಾಳ ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುರವಿಹಾಳ ಪಟ್ಟಣದಲ್ಲಿ 75 ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಮೂಹಿಕ ವಿವಾಹದಲ್ಲಿ ಶಾಸಕರ ಮಗನ ಹಾಗೂ ಸಹೋದರನ ಮಗನ ಮದುವೆ ಸಹ ನೆರವೇರಿಸಲಾಗುವುದು.ಜೊತೆಗೆ ಬಸ್ ನಿಲ್ದಾಣ, ಪದವಿ ಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣ, ಬಾಲಕರ ವಸತಿ ಶಾಲೆ, ಮಸ್ಕಿಯಲ್ಲಿ ತಾಲೂಕ ಆಡಳಿತ ಕಚೇರಿಯ ಸಲುವಾಗಿ ಪ್ರಜಾಸೌಧ, ಗುಂಜಳ್ಳಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಕೆ.ಕೆಆರ್.ಡಿ.ಬಿ ಕಲ್ಯಾಣ ಪಥ ಯೋಜನೆಯ ಗ್ರಾಮೀಣ ರಸ್ತೆಗಳ ನಿರ್ಮಾಣ ಕಾಮಗಾರಿ, ಕೆರೆ ತುಂಬಿಸುವ ಯೋಜನೆ, ಗುಂಡಾದಲ್ಲಿ ಪ್ರಾಥಾಮಿಕ ಆರೋಗ್ಯ ಕೇಂದ್ರ, ಬಳಗಾನೂರ ಪೊಲೀಸ್ ಠಾಣೆ ಕಟ್ಟಡ, ಪಾಮನಕೆಲ್ಲೂರು ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿಯಲ್ಲಿ ಮೌಲಾನ ಅಜಾದ್ ಶಾಲೆ, ಉಮಲೂಟಿ-ಮಹಾಂಪೂರು ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮತ್ತು ತುರವಿಹಾಳ, ಮಸ್ಕಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನಿ, ತುರವಿಹಾಳ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಕಾಮಗಾರಿ, ಕನಕ ಭವನವನ್ನು ಉದ್ಘಾಟನೆ ಸೇರಿದಂತೆ ಒಟ್ಟು 800ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಳಗಾನೂರು ಪಟ್ಟಣದ ನಿವೇಶನ ತಹಿತರಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ಅಂದಿನ ದಿನ ವಿವಿಧ ಮಠದ ಸ್ವಾಮೀಜಿಗಳು, ಶಾಸಕ ಬಸನಗೌಡ ದದ್ದಲ, ಶಾಸಕ ಹಂಪನಗೌಡ ಬಾದರ್ಲಿ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಕೆಪಿಸಿಸಿ ಸದಸ್ಯ ಸಿದ್ದನಗೌಡ ಮಾಟೂರು, ಮೂಬುಸಾಬ ಮುದ್ದಾಪೂರ, ಮಲ್ಲಿಕಾರ್ಜುನ ಮುದ್ದಾಪೂರ, ಜಿಲ್ಲಾ ಉಪಾಧ್ಯಕ್ಷ ನಿರುಪಾದೆಪ್ಪ ವಕೀಲರು, ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗಭೂಷನ ಬಾರಕೇರ್, ಬಸನಗೌಡ ಪೊಲೀಸ್ ಪಾಟೀಲ, ಮಲ್ಲಯ್ಯ ಮುರಾರಿ, ಶಫೀಕ್, ಅಹ್ಮದ್ ಶೇರ, ರವಿ ಮಡಿವಾಳ ಸೇರಿದಂತೆ ಇನ್ನಿತರಿದ್ದರು.
ವರದಿ : ಸಿದ್ದಯ್ಯ ಹೆಸರೂರು tv8kannada ಮಸ್ಕಿ