ರಾಜ್ಯಸುದ್ದಿ

ಮಕ್ಕಳ ಮೆಮೊರಿ ಬೂಸ್ಟರ್ ಈ ದೇವರ ಪ್ರೀತಿಯ ಶಂಖಪುಷ್ಪ..!

ಶಂಖಪುಷ್ಪ(Shankhapushpa) ಹೂವು ಹೆಚ್ಚಾಗಿ ಬೇಸಿಗೆ(Summer)ಮತ್ತು ಮಳೆಗಾಲದಲ್ಲಿ(Monsoon) ಬಿಡುತ್ತದೆ. ಆದರೆ ವರ್ಷದ ಎಲ್ಲಾ ಸಮಯದಲ್ಲಿ ಗಿಡದಲ್ಲಿ ಹೂವು ಬಿಡುತ್ತದೆ.  ಇದನ್ನು ಪ್ರಕೃತಿಯ ಅದ್ಭುತ ಕೊಡುಗೆ ಎನ್ನಲಾಗುತ್ತದೆ. ಇದು ಕನ್ವಾಲ್ವುಲೇಸಿ ಸಸ್ಯ ಕುಟುಂಬಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಕಾನ್ವೊಲ್ವುಲಸ್ ಪ್ಲುರಿಕೌಲಿಸ್(Convolvulus Pluricaulis). ಹೂವುಗಳು ನೀಲಿ, ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಸುಮಾರು 2 ಮಿಮೀ – 5 ಮಿಮೀ ಗಾತ್ರದಲ್ಲಿರುತ್ತವೆ. ಭಾರತದಲ್ಲಿ ಬಿಹಾರ ಮತ್ತು ಪಂಜಾಬ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇದನ್ನು ಮನೆಯಲ್ಲಿ ಸಹ ಬೆಳೆಯಬಹುದು. ಇದು ಒಂದು ಬಳ್ಳಿಯ ರೀತಿ ಹಬ್ಬಿಕೊಳ್ಳುತ್ತದೆ.

ಹೂವಿನ ಪ್ರಾಮುಖ್ಯತೆ:

ಶಂಖಪುಷ್ಪ ಅದರ ಆರೋಗ್ಯದ ಪ್ರಯೋಜನಗಳ ಕಾರಣದಿಂದಾಗಿ ಆಯುರ್ವೇದದಲ್ಲಿ ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ. ಇದು ಮುಖ್ಯವಾಗಿ ಆರೋಗ್ಯಕರ ಮೆದುಳು ಮತ್ತು ಮನಸ್ಸನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಮೂಲಕ ನರಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಮೆಮೊರಿ ಮತ್ತು ಏಕಾಗ್ರತೆ ಹೆಚ್ಚಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇತರ ಗಿಡಮೂಲಿಕೆಗಳೊಂದಿಗೆ ಇದನ್ನು ಬೆರೆಸಿದಾಗ ಸ್ಕಿಜೋಫ್ರೇನಿಯಾ, ಖಿನ್ನತೆ, ಅಪಸ್ಮಾರ ಮತ್ತು ಆಕ್ರಮಣಕಾರಿ ನಡವಳಿಕೆಯ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿ ಎನ್ನಲಾಗುತ್ತದೆ.

ಶಂಖಪುಷ್ಪವನ್ನು ಸಾಮಾನ್ಯವಾಗಿ ಪೇಸ್ಟ್, ಪೌಡರ್ ಮತ್ತು ಟಾನಿಕ್ ಆಗಿ ವಿವಿಧ ವಸ್ತುಗಳಲ್ಲಿ ಬಳಸಲಾಗುತ್ತದೆ. ಇವುಗಳಲ್ಲಿ ಬಳಸಲಾಗುವ ಭಾಗಗಳೆಂದರೆ ಎಲೆಗಳು, ಹೂವುಗಳು, ಕಾಂಡ, ಬೇರುಗಳು, ಬೀಜಗಳು ಮತ್ತು ಬೂದಿ.

Related Articles

Leave a Reply

Your email address will not be published. Required fields are marked *

Back to top button