ದೇಶಸುದ್ದಿ

ತಿಂಗಳಿಗೆ ₹25,500 ಸಂಬಳ, 10ನೇ ತರಗತಿ ಪಾಸಾದವರಿಗೆ ಭಾರತೀಯ ವಾಯುಪಡೆಯಲ್ಲಿ ಉದ್ಯೋಗ..!

Indian Air Force Recruitment 2021: ಭಾರತೀಯ ವಾಯು ಪಡೆ(Indian Air Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 83 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff), ಸಿವಿಲಿಯನ್ ಮೆಕ್ಯಾನಿಕಲ್ ಟ್ರಾನ್ಸ್​ಪೋರ್ಟ್​​ ಡ್ರೈವರ್(Civilian Mechanical Transport Driver), ಲೋಯರ್ ಡಿವಿಷನ್ ಕ್ಲರ್ಕ್(Lower Division Clerk), ಕಾರ್ಪೆಂಟರ್(Carpenter), ಫೈರ್​ಮ್ಯಾನ್(Fireman), ಸೂಪರಿಂಟೆಂಡೆಂಟ್ (Superintendent) ಹಾಗೂ ಕುಕ್(Cook) ಪೋಸ್ಟ್​ಗಳು ಖಾಲಿ ಇವೆ. 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆಫ್​ಲೈನ್​(ಪೋಸ್ಟಲ್​) ಮೂಲಕ ನವೆಂಬರ್ 29ರವರೆಗೆ ಅರ್ಜಿ ಹಾಕಬಹುದು. ಅಕ್ಟೋಬರ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಭಾರತೀಯ ವಾಯುಪಡೆ
ಜಾಹೀರಾತು ಸಂಖ್ಯೆ05/2021/DR
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್ ಸ್ಟಾಫ್​, ಸಿವಿಲಿಯನ್​ ಮೆಕ್ಯಾನಿಕಲ್​ ಟ್ರಾನ್ಸ್​​ಪೋರ್ಟ್​ ಡ್ರೈವರ್, ಲೋಯರ್ ಡಿವಿಶನ್ ಕ್ಲರ್ಕ್​, ಕಾರ್ಪೆಂಟರ್, ಫೈರ್​ಮ್ಯಾನ್​, ಸೂಪರಿಂಟೆಂಡೆಂಟ್​, ಕುಕ್​.
ಒಟ್ಟು ಹುದ್ದೆಗಳು83
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ, ಪದವಿ, ಡಿಪ್ಲೋಮಾ,
ಉದ್ಯೋಗದ ಸ್ಥಳಪ್ಯಾನ್​ ಇಂಡಿಯಾ
ಸಂಬಳಮಾಸಿಕ ₹18,000-25,500
ಅರ್ಜಿ ಸಲ್ಲಿಸುವ ಬಗೆಆಫ್​ಲೈನ್​(ಪೋಸ್ಟಲ್)
ಅರ್ಜಿ ಸಲ್ಲಿಕೆ ಆರಂಭ ದಿನಾಂಕ29/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ29/11/2021

Related Articles

Leave a Reply

Your email address will not be published. Required fields are marked *

Back to top button