ಸಿನಿಮಾಸುದ್ದಿ

ಸ್ಯಾಂಡಲ್​ವುಡ್​ನಲ್ಲಿ `ಶೋ’ ಮುಗಿಸಿದ ‘ದಿ ರಾಜ್​’: ದೊಡ್ಮನೆ ಮಗನ ದೊಡ್ಡತನಕ್ಕೆ ಸಮಾನರು ಇಲ್ಲ..!

ನಿನ್ನೆ ಕನ್ನಡ ಚಿತ್ರಂರಗ(Sandalwood) ಮಾತ್ರವಲ್ಲದೇ, ಇಡೀ ಭಾರತ ಚಿತ್ರರಂಗ(Indian Cinema Industry)ಕ್ಕೆ ಕರಾಳ ದಿನ. ಯಾರೂ ಊಹಿಸಲಾಗದ ಘಟನೆಯೊಂದು ಬರಸಿಡಿಲಿನಂತೆ ಬಡಿದು, ಕೋಟ್ಯಾಂತರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಚಂದನವನದ ಪವರ್ ಸ್ಟಾರ್(Power Star)​, ಮೇರುನಟ ಡಾ.ರಾಜ್​ಕುಮಾರ್(Dr. Rajkumar)​ ಅವರ ಕೊನೆಯ ಪುತ್ರ ಪುನೀತ್​ ರಾಜ್​ಕುಮಾರ್​(Puneeth Rajkumar) ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಯಾರಿಗೂ ಹೇಳದೇ, ಕೇಳದೇ ಅಪ್ಪು ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

ಸಖತ್ ಫಿಟ್​ & ಫೈನ್(Fit & Fine) ಆಗಿದ್ದ ಅಪ್ಪು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಂಠೀರವ  ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಇಟ್ಟಿದ್ದಾರೆ. ಅಸಂಖ್ಯಾತ ಸಂಖ್ಯೆಯಲ್ಲಿ ಅಭಿಮಾನಿಗಳು ರಾತ್ರಿಯಿಂದ ಅವರ ಅಂತಿಮ ದರ್ಶನ ಪಡೆದಿದ್ದಾರೆ. ತಮ್ಮ ನೆಚ್ಚಿನ ನಟನ ಅಕಾಲಿಕ ಮರಣಕ್ಕೆ ಕಣ್ಣೀರು ಹಾಕುತ್ತಾ, ಆ ವಿಧಿಯ ಆಟಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ತೆರೆ ಮೇಲೆ ಯಾರು ಬೇಕಾದರೂ ಹೀರೋ(Hero) ಆಗಬಹುದು. ಆದರೆ ಅಪ್ಪು ನಿಜ ಜೀವನದಲ್ಲೂ ರಿಯಲ್​ ಹೀರೋ(Real Hero) ಆಗಿದ್ದರು. ನೊಂದವರ, ಬಡವರ ಪಾಲಿನ ದೇವರಾಗಿದ್ರು. ಯಾರಿಗೂ ತಿಳಿಯದಂತೆ ಒಳ್ಳೆಯ ಕಾರ್ಯಗಳನ್ನ ಅಪ್ಪು ಮಾಡುತ್ತಿದ್ದರು. ಎಲ್ಲಿಯೂ ಎಂದಿಗೂ ಈ ಬಗ್ಗೆ ಅಪ್ಪು ತೋರಿಕೆ ಮಾಡಿರಲಿಲ್ಲ. 

 26 ಅನಾಥಶ್ರಮ, 45 ಉಚಿತ ಶಾಲೆ

ಅಪ್ಪು ಸದಾ ಹಸನ್ಮುಖಿ, ಸದಾ ನಗು ಮುಖದಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದರು. ಎಂದಿಗೂ ಯಾರಿಗೂ ಕೇಡು ಬಯಸದ ವ್ಯಕ್ತಿತ್ವ. ಅವರಿಗೆ ಅವರೇ ಸಾಟಿ. ಅವರಂತೆ ಮತ್ತೊಬ್ಬ ನಟ, ವ್ಯಕ್ತಿ ಹುಟ್ಟಿಬರಲು ಸಾಧ್ಯವಿಲ್ಲ. ಸಣ್ಣ ಪುಟ್ಟ ಸಹಾಯ ಮಾಡಿದವರೇ, ಊರು ತುಂಬಾ ಹೇಳಿಕೊಂಡು ಬರುವ ಈ ಕಾಲದಲ್ಲಿ ಅಪ್ಪು ಮಾಡುತ್ತಿದ್ದ ಸಮಾಜಸೇವೆ ನಿಜಕ್ಕೂ ಮನ ಮುಟ್ಟುವಂತಿದೆ. 16 ಅನಾಥಶ್ರಮವನ್ನು ಅಪ್ಪು ನಡೆಸುತ್ತಿದ್ದರು. ತಬ್ಬಲಿಯಾದ ಮಕ್ಕಳನ್ನು ತನ್ನ ಮಕ್ಕಳಂತೆ ಆರೈಕೆ ಮಾಡುತ್ತಿದ್ದರು. 16 ಅನಾಥಶ್ರಮ ನಡೆಸುವುದು ಅಂದರೆ ತಮಾಷೆಯ ಮಾತಲ್ಲ. ಇಷ್ಟಕ್ಕೆ ನಿಲ್ಲದ  ಮಕ್ಕಳ ಮೇಲಿನ ಕಾಳಜಿ, 45 ಉಚಿತ ಶಾಲೆಗಳನ್ನ ಅಪ್ಪು ನಿರ್ಮಿಸಿದ್ದರು. ಇಂದಿನ ಮಕ್ಕಳೇ ನಾಳೆಯ  ನಮ್ಮ ದೇಶದ ಭವಿಷ್ಯ ಎಂಬುಂದನ್ನು ಅರಿತ ಅಪ್ಪು, ಅವರಿಗೆ ಶಿಕ್ಷಣದ ವ್ಯವಸ್ಥೆಯನ್ನು ಮಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button