ಮೊನ್ನೆ ತಾನೇ ಯಶ್ ರಾಜ್ ಫಿಲ್ಮ್ಸ್ ಮುಂಬರುವ ಚಲನಚಿತ್ರ ‘ಬಂಟಿ ಔರ್ ಬಬ್ಲಿ 2’ (Bunty Aur Babli 2) ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ಮಾಪಕರು ಬದಲಾಯಿಸಿದ್ದಾರೆ ಎಂದು ಚಿತ್ರದ ನಟ ಸೈಫ್ ಅಲಿ ಖಾನ್ (Saif Ali Khan) ಮತ್ತು ನಟಿ ರಾಣಿ ಮುಖರ್ಜಿ (Rani Mukerji) ಕೋಪಗೊಂಡಿದ್ದು ನಮಗೆಲ್ಲಾ ತಿಳಿದೇ ಇದೆ. ಆದರೆ ಈಗ ಮತ್ತೊಮ್ಮೆ ಈ ಚಿತ್ರವು ಸುದ್ದಿಯಲ್ಲಿದೆ, ಆದರೆ ಈ ಬಾರಿ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿದೆ.‘ಬಂಟಿ ಔರ್ ಬಬ್ಲಿ 2’ ಚಿತ್ರತಂಡವು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದು, ಹಾಡು ‘ಟ್ಯಾಟೂ ವಾಲಿಯೇ’ ಎಂಬ ಶೀರ್ಷಿಕೆ ಹೊಂದಿದೆ. ಈ ಹಾಡಿನಲ್ಲಿ ನಟ ಸೈಫ್ ಅಲಿ ಖಾನ್, ನಟಿ ರಾಣಿ ಮುಖರ್ಜಿ, ಇನ್ನೊಬ್ಬ ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಮತ್ತು ನಟಿ ಶರ್ವರಿ (Sharvari ) ಚಿತ್ರದ ಎಲ್ಲಾ ನಾಲ್ಕು ಮುಖ್ಯ ಪಾತ್ರದಲ್ಲಿರುವವರು ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿದೆ.
ಈ ಚಿತ್ರದ ಪ್ರಚಾರ ಹಾಡಿನಲ್ಲಿ ಈ ನಾಲ್ವರು ನಟರು ಮನಮೋಹಕ ಮತ್ತು ಹೊಳಪಿನ ಬಟ್ಟೆಗಳನ್ನು ತೊಟ್ಟು ಹೆಜ್ಜೆ ಹಾಕಿದ್ದಾರೆ. ಅವರು ಶಂಕರ್–ಎಹಸಾನ್–ಲಾಯ್ ಅವರ ಪೆಪ್ಪಿ ಬೀಟ್‌ಗಳಿಗೆ ಸರಿಯಾಗಿ ಹೊಂದುವಂತೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ತಾವು ಹಾಕಿಸಿಕೊಂಡ ಟ್ಯಾಟೂಗಳನ್ನು ತೋರಿಸುತ್ತಾರೆ. ಈ ಹಾಡನ್ನು ಗಾಯಕಿ ನೇಹಾ ಕಕ್ಕರ್ ಮತ್ತು ಗಾಯಕರಾದ ಪರ್ದೀಪ್ ಸ್ರಾನ್ ಹಾಡಿದ್ದಾರೆ.
ಈ ಹಾಡಿನಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನು ಅಂತೀರಾ..? ನಟಿ ರಾಣಿಯ ಉಡುಗೆಯು 1998ರ ‘ಕುಚ್ ಕುಚ್ ಹೋತಾ ಹೈ’ ಚಿತ್ರದಲ್ಲಿ ಧರಿಸಿದ್ದ ಬೆಳ್ಳಿ ಬಣ್ಣದ ಉಡುಪನ್ನು ನಿಮಗೆ ನೆನಪಿಸಬಹುದು. ಅವರು ಶಾರುಖ್ ಖಾನ್ ಮತ್ತು ಕಾಜೋಲ್‌ರೊಂದಿಗೆ ‘ಕೋಯಿ ಮಿಲ್ ಗಯಾ’ ಎಂಬ ಹಾಡಿಗೆ ಇದೇ ರೀತಿಯ ಉಡುಪಿನಲ್ಲಿ ಹೆಜ್ಜೆ ಹಾಕಿದ್ದರು.