ಭಜರೆ ಭಜರೆ ಭಜ ಭಜ ಭಜ ಭಜರೆ… ಭಜರಂಗಿ. ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆ ಮೇಲೆ ಭಜರಂಗಿಯ ಅಬ್ಬರ ಶುರುವಾಗಿದೆ. ರಾಜ್ಯಾದ್ಯಾಂತ ಇಂದಿನಿಂದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್(Shivrajkumar) ಅಭಿನಯದ ಭಜರಂಗಿ-2 (bhajarangi-2) ಸಿನಿಮಾ(Movie) ಬಿಡುಗಡೆಯಾಗಿದೆ. ಬೆಳಗ್ಗೆ 10ಕ್ಕೆ ಅನುಪಮಾ ಚಿತ್ರಮಂದಿರದಲ್ಲಿ ಶೋ ಆರಂಭವಾಗಿದೆ. ಆದರೆ ಸೂರ್ಯೋದಯಕ್ಕೂ ಮುನ್ನವೇ ಅಭಿಮಾನಿಗಳು(Fand) ಶಿವಣ್ಣನ ದರ್ಶನ ಪಡೆದಿದ್ದಾರೆ.
ಬೆಳಗ್ಗೆ 5 ಗಂಟೆಗೆ ಗೌಡನಪಾಳದ್ಯ ಶ್ರೀನಿವಾಸ(Srinivasa) ಹಾಗೂ ಜೆಪಿ ನಗರ ಸಿದ್ದೇಶ್ವರ(Siddeshwaea) ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋ(Fans Show) ಆರಂಭವಾಗಿದೆ. ಅಭಿಮಾನಿಗಳ ಜೊತೆ ಚಿತ್ರತಂಡ ಸಿನಿಮಾ ನೋಡುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಭಜರಂಗಿ ಲೋಕಿ, ವಸಿಷ್ಠ ಸಿಂಹ ಸೇರಿ ಅನೇಕರು ಫ್ಯಾನ್ಸ್ ಶೋಗೆ ಆಗಮಿಸಿದ್ದಾರೆ. 1 ವರ್ಷದ ಬಳಿಕ ತೆರೆ ಮೇಲೆ ಶಿವರಾಜ್ ಕುಮಾರ್ ಮತ್ತೆ ಅಬ್ಬರಿಸಿದ್ದಾರೆ. ಕೊರೋನಾ ಅಬ್ಬರದ ಬಳಿಕ ಶಿವಣ್ಣನ ಸಿನಿಮಾ ಬಿಡುಗಡೆಯಾಗಿರುವುದು ಅವರ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಬೆಳ್ಳಂಬೆಳಗ್ಗೆ ಅದ್ಧೂರಿ ಫ್ಯಾನ್ಸ್ ಶೋ
ಇಂದಿನಿಂದ ರಾಜ್ಯದಲ್ಲಿ 300 ಚಿತ್ರಮಂದಿರಗಳಲ್ಲಿ ಭಜರಂಗಿ-2 ಅಬ್ಬರ ಶುರುವಾಗಲಿದೆ. ಅದಕ್ಕೂ ಮುನ್ನ ದೊಡ್ಮನೆ ಅಭಿಮಾನಿಗಳು ಅದ್ಧೂರಿಯಾಗಿ ಫ್ಯಾನ್ಸ್ ಶೋ ಏರ್ಪಡಿಸಿದ್ದಾರೆ. ಗೌಡನಪಾಳದ್ಯ ಶ್ರೀನಿವಾಸ ಚಿತ್ರಮಂದಿರ ಭಜರಂಗಿ-2 ಸಿನಿಮಾದ ಬ್ಯಾನರ್ಗಳಿಂದ ಮುಚ್ಚಿಹೋಗಿದೆ. ಮುಂಜಾನೆ 5 ಗಂಟೆಗೆ ಶೋ ಆರಂಭವಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೇ ಚಿತ್ರಮಂದಿರಕ್ಕೆ ಶಿವರಾಜ್ ಕುಮಾರ್ ಕೂಡ ಆಗಮಿಸಿದ್ದು, ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಸ್ವತಃ ಶಿವರಾಜ್ ಕುಮಾರ್ ಅವರನ್ನು ನೋಡಿ ಖುಷಿ ಪಟ್ಟಿದ್ದಾರೆ.