ರಾಜ್ಯಸುದ್ದಿ

ಕುಡಿಯುವ ನೀರಿನಲ್ಲಿ ಮೂಳೆ-ಮಾಂಸ ಪತ್ತೆ, ತಿಳಿಯದೆ ಅದನ್ನೇ ಕುಡಿಯುತ್ತಿದ್ದರಾ ಗ್ರಾಮದ ಜನ?

(ರಾಮನಗರ) ಚನ್ನಪಟ್ಟಣ : ರಾಮನಗರ ಜಿಲ್ಲೆಯ ಚನ್ನಪಟ್ಟಣ (Channapatna) ನಗರದ ಮಾರುತಿ ಬಡಾವಣೆಯ ಓವರ್ ಹೆಡ್ ನೀರಿನ ಟ್ಯಾಂಕರ್ (Overhead Water Tank) ನಲ್ಲಿ ಯುವತಿಯ ಕಾಲು ಪತ್ತೆಯಾಗಿತ್ತು. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅದು 20 ವರ್ಷ ವಯಸ್ಸಿನ ಯುವತಿಯ ಬಲಗಾಲು, ಬಲವಾದ ಆಯುಧದಿಂದ ಕತ್ತರಿಸಲಾಗಿದೆ (Murder) ಎಂದು ವರದಿ ಬಂದಿತ್ತು.‌ ಅಕ್ಟೋಬರ್ 9 ನೇ ತಾರೀಖು ಈ ಘಟನೆ ನಡೆದಿತ್ತು. ನಂತರ ಈ ವಿಚಾರವಾಗಿ ಕಾವೇರಿ ನೀರು ಸರಬರಾಜು, ಒಳಚರಂಡಿ ಮಂಡಳಿಯವರು ಇವತ್ತು ಮತ್ತೆ ಪೈಪ್ ಲೈನ್ ನಲ್ಲಿ ಪರಿಶೀಲನೆ ನಡೆಸಿದಾಗ ಮತ್ತಷ್ಟು ಮಾಂಸ, ಮೂಳೆ ಪತ್ತೆಯಾಗಿರುವುದು (Bones in Drinking water pipe) ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು ಜಲಮಂಡಳಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ನೀರಿಲ್ಲ, ಆದ್ರೆ ಬಿಲ್ ಮಾತ್ರ ಬರ್ತಿದೆ

ಕಳೆದ 1 ತಿಂಗಳಿನಿಂದ ನಮಗೆ ಕಾವೇರಿ ನೀರು ಪೂರೈಕೆಯಾಗಿಲ್ಲ. ಆದರೆ ಇಲಾಖೆಯಿಂದ ನೀರಿನ ಬಿಲ್ ಬಂದಿದೆ. ಇನ್ನು ಅಧಿಕಾರಿಗಳು ಈ ವಿಚಾರವಾಗಿ ಯಾವುದೇ ಬಿಗಿ ಕ್ರಮ ವಹಿಸಿಲ್ಲ. ಬದಲಾಗಿ ಬೇಜಾಬ್ದಾರಿಯುತವಾಗಿ ಕೆಲಸ ಮಾಡ್ತಿದ್ದಾರೆ. ಘಟನೆ ನಂತರ ಹತ್ತುದಿನಗಳ ಕಾಲ ಯಾವುದೇ ಕೆಲಸಗಳನ್ನ ಮಾಡಲಿಲ್ಲ. ಈಗ ಸಾರ್ವಜನಿಕರು ಒತ್ತಾಯಿಸಿದ ನಂತರ ಮತ್ತೆ ಪೈಪ್ ಲೈನ್ ನ್ನ ಪರಿಶೀಲನೆ ಮಾಡ್ತಿದ್ದಾರೆ. ಹಾಗಾಗಿ ಈ ಕೂಡಲೇ ಅಧಿಕಾರಿಗಳ ವರ್ಗ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಅಕ್ಟೋಬರ್ 9 ನೇ ತಾರೀಖು ಈ ನಡೆದಿದ್ದ ದಿನ‌ ತಕ್ಷಣವೇ ಕ್ಷೇತ್ರದ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಈ ಕ್ಷಣದಿಂದಲೇ ಯಾವುದೇ ಕಾರಣಕ್ಕೂ ಟ್ಯಾಂಕ್ ನೀರು ಕೊಡಬೇಡಿ.‌ ಬದಲಾಗಿ ಟ್ಯಾಂಕರ್ ಗಳಲ್ಲಿ ಪೂರೈಕೆ ಮಾಡಿ ಎಂದಿದ್ದರು.‌ ಆದರೆ 9, 10, 11 ನೇ ವಾರ್ಡ್ ಗೆ ಸಂಬಂಧಿಸಿದಂತೆ ಈಗಾಗಲೇ ಬೋರ್ ವೆಲ್ ಗಳು ಇರುವ ಹಿನ್ನೆಲೆ ಜನರಿಗೆ ನೀರಿನ ಸಮಸ್ಯೆಯಿಲ್ಲ.

Related Articles

Leave a Reply

Your email address will not be published. Required fields are marked *

Back to top button