ಚಿತ್ರದುರ್ಗ : ಸರ್ಕಾರಗಳು (Governments) ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ (Education) ಎಲ್ಲಿಲ್ಲದ ಸವಲತ್ತು ಕೊಟ್ಟಿದ್ದೇವೆ ಅಂತ ಬೊಬ್ಬೆ ಹೊಡೆಯುತ್ತವೆ. ಆದರೇ ಚಿತ್ರದುರ್ಗ (Chitradurga) ಜಿಲ್ಲೆ ಆಂದ್ರಾ ಗಡಿ ಗ್ರಾಮಗಳ ಮಕ್ಕಳು ಮುರುಕಲು ಶಾಲೆಯಲ್ಲಿ ಜೀವ ಕೈಯಲ್ಲಿಡಿದು, ಬಿಸಿಲು ಮಳೆ ಲೆಕ್ಕಿಸದೆ ಮರಗಳ ನೆರಳನ್ನ ಆಶ್ರಯಿಸಿ ಪಾಠ ಕೇಳುವ ದುಸ್ಥಿತಿ ಬಂದಿದೆ. ಹಿಂದುಳಿದ ಜಿಲ್ಲೆಯಲ್ಲಿ ಕೂಲಿ ನಾಲಿ ಬದುಕು ಸಾಗಿಸುವ ಜನರು ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು (Minister B Sriramulu) ಅವರ ಕ್ಷೇತ್ರದ ಈ ಶಾಲೆ ಅಭಿವೃದ್ದಿಯ ಇಚ್ಚಾ ಶಕ್ತಿ ಕೊರತೆಯನ್ನ ತೋರುತ್ತಿದೆ.

ಸಾಕ್ಷರತೆ ಮೇಲಿನ ಪ್ರೀತಿಗೆ ಕೊರತೆಯೇ ಇಲ್ಲ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಓಬಳಾಪುರ ಗ್ರಾಮ ಮೊಳಕಾಲ್ಮೂರು (Molakalmuru) ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅಲ್ಲದೇ ಎರಡೂ ತಾಲ್ಲೂಕುಗಳಿಂದ ದೂರುವಿರುವ ಈ ಗ್ರಾಮ ಪಕ್ಕದ ಆಂಂಧ್ರ ಗಡಿಲ್ಲಿದೆ. ಇಲ್ಲಿ ಹೇಳಿ ಕೇಳಿ ಬಡತನ, ಬರ, ತಾಂಡವ ಆಡುತ್ತದೆ. ಇಲ್ಲಿನ ಜನರು ಕೂಲಿ ನಾಲಿ ಮಾಡಿ ಬದುಕಿನ ಬಂಡಿ ಸಾಗಿಸಬೇಕಿದೆ. ಅದರೇ ಇವರಿಗಿರೋ ಶಿಕ್ಷಣ, ಸಾಕ್ಷರತೆ ಮೇಲಿನ ಪ್ರೀತಿಗೆ ಕೊರತೆಯೇ ಇಲ್ಲ. ಆದ್ದರಿಂದಲೇ ಇಂದಿನ ಖಾಸಗಿ ಶಾಲೆಗಳ ಆವಳಿಯಿಂದ ಮುಚ್ಚಿ ಬರಿದಾಗುತ್ತಿರುವ ಸರ್ಕಾರಿ ಶಾಲೆಗಳ ನಡುವೆ ಕೊಂಚವೂ ಕೂಡಾ ಮಕ್ಕಳ ಹಿಂದೆ ಸರಿಯದೆ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದೆ. ನೂರು ವರ್ಷ ಹಳೆಯದಾಗಿರೋ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 271 ಮಕ್ಕಳು ದಾಖಲಾಗಿದ್ದಾರೆ.
ಮರದ ನೆರಳಿನಲ್ಲಿ ಮಕ್ಕಳಿಗೆ ಪಾಠ
ಸರ್ಕಾರಿ ಶಾಲೆ ಉಳಿವಿಗೆ ಹಲವು ಅಭಿಯಾನಗಳನ್ನ ಮಾಡಿ ಜಾಗೃತಿ ಮೂಡಿಸುವ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯ ಕಟ್ಟಡಗಳು, ಮೇಲ್ಚಾವಣಿ ಮುರಿದು ಬಿದ್ದು ಬಿದ್ದು, ವಿದ್ಯಾರ್ಥಿಗಳು ಮರದ ನೆರಳನ್ನ ಆಶ್ರಯಿಸಿ ಬೀದಿಯಲ್ಲಿ ಕುಳಿತು ಪಾಠ ಕೇಳಿದ್ರು ಶಾಲೆ ಕಟ್ಟಡಗಳ ಮರು ನಿರ್ಮಾಣ, ಅಥವಾ ಅಭಿವೃದ್ದಿಗೆ ಶಿಕ್ಷಣ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಮುಂದಾಗದೆ ದಿವ್ಯ ನಿರ್ಲಕ್ಷ ತೋರಿದ್ದಾರೆ.