ವಾಷಿಂಗ್ಟನ್: ಮಹಿಳೆಯರಿಗೆ ಶಾಪಿಂಗ್ (Online Shopping) ಎಷ್ಟೇ ಮಾಡಿದ್ರೂ ಸಾಕಾಗಲ್ಲ. ಮನೆಯಲ್ಲಿ ಬಟ್ಟೆಗಳು ತುಂಬಿದ್ದರೂ ಹೊಸದನ್ನು ಖರೀದಿ ಮಾಡಲು ಹಿಂದೇಟು ಹಾಕಲ್ಲ. ಸದ್ಯ ಎಲ್ಲವೂ ಆನ್ ಲೈನ್ ಕಾಲ. ಬೆರಳತುದಿಯಲ್ಲಿಯೇ ಶಾಪಿಂಗ್ ಮಾಡಬಹುದು. ಯಾವುದೇ ಆಯಸವಿಲ್ಲದೇ ನಿಮ್ಮಿಷ್ಟದ ವಸ್ತು ನಿಮ್ಮ ಮನೆಯ ಬಾಗಿಲು ತಲುಪುತ್ತದೆ. ಇನ್ನು ಕೆಲ ಮಹಿಳೆಯರು (Women) ಪತಿ ಅಥವಾ ಪೋಷಕರಿಗೆ ತಿಳಿಯದಂತೆ ಶಾಪಿಂಗ್ ಮಾಡುತ್ತಿರುತ್ತಾರೆ. ಅಮೆರಿಕದ ಮಹಿಳೆ ಪತಿಗೆ ತಿಳಿಯದಂತೆ ಆನ್ ಲೈನ್ ಶಾಪಿಂಗ್ ಮಾಡಿದ್ದರಿಂದ, ತನ್ನ ಗ್ರಾಹಕಿಯ ಹಿತ ಕಾಪಾಡಲು ಆಮೆಜಾನ್ ಡೆಲಿವರಿ ಗರ್ಲ್ (Amazon Delivery Girl)ಮಾಡಿದ ಪ್ಲಾನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಅಮೆಜಾನ್ ಡೆಲಿವರಿ ಗರ್ಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನೆಗೆ ಬಂತು ಪಾರ್ಸೆಲ್
ಡೇಲಿ ಮೇಲ್ ವರದಿ ಪ್ರಕಾರ ಈ ಘಟನೆ ನಡೆದಿದ್ದು, ಅಮೆರಿಕಾದ ಓಕ್ಲೋಹೊಮಾದಲ್ಲಿ. ಮನೆಗೆ ಪಾರ್ಸೆಲ್ ತಂದು ಅದನ್ನು ಬಚ್ಚಿಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗ್ರಾಹಕಿ ತನಗೆ ಯುವತಿ ಸಹಾಯ ಮಾಡಿದ ಸಹಾಯವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಓರ್ವ ಅಮೇಜಾನ್ ಡೆಲಿವರಿ ಗರ್ಲ್ ಪಾರ್ಸೆಲ್ ತೆಗೆದುಕೊಂಡು ಮನೆಯ ಹತ್ತಿರ ಬರುತ್ತಾಳೆ. ಬಂದ ಕೂಡಲೇ ಪಾರ್ಸೆಲ್ ಮನೆಯ ಮುಂದೆ ಇರಿಸುತ್ತಾಳೆ. ಅಲ್ಲಿ ಆಕೆಗೆ ಒಂದು ಚೀಟಿ ಕಾಣಿಸುತ್ತದೆ. ಚೀಟಿಯಲ್ಲಿ ಪತಿಗೆ ತಿಳಿಯದಂತೆ ಶಾಪಿಂಗ್ ಮಾಡಿದ್ದು, ಪಾರ್ಸೆಲ್ ಮುಚ್ಚಿಡಿ ಎಂದು ಬರೆಯಲಾಗಿತ್ತು. ಕೂಡಲೇ ಪಾರ್ಸೆಲ್ ಎತ್ತಿಕೊಂಡ ಮಹಿಳೆ, ಅದನ್ನು ಪಕ್ಕದಲ್ಲಿರುವ ಪೊದೆಗಳ ಮಧ್ಯೆ ಬಚ್ಚಿಡುತ್ತಾಳೆ. ಪೊದೆಯಲ್ಲಿರಿಸಿದ ಪಾರ್ಸೆಲ್ ಫೋಟೋ ಕ್ಲಿಕ್ಕಿಸಿಕೊಂಡ ಯುವತಿ ಹಿಂದಿರುಗಿದ್ದಾಳೆ.