ಬಾಲಿವುಡ್ ನಟಿ ಕರೀನಾ ಕಪೂರ್ (Kareena kapoor) ಯಶಸ್ವಿ ನಟಿ ಮಾತ್ರವಲ್ಲ, ತೈಮೂರ್ (Taimur) ಮತ್ತು ಜೆಹ್ (Jeh) ಎಂಬ ಇಬ್ಬರು ಮುದ್ದು ಮಕ್ಕಳ ತಾಯಿ ಕೂಡ. ಮಹಿಳೆಯರು ನಿರ್ದಿಷ್ಟ ವಯಸ್ಸಿನ ಒಳಗೆ ಗರ್ಭ ಧರಿಸಬೇಕು ಎಂಬ ಸಂಗತಿಯ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳದ ಅವರು, ಸ್ವತಃ ಮಕ್ಕಳಿಗೆ ಜನ್ಮ ನೀಡಿದ್ದು 35 ವಯಸ್ಸು ದಾಟಿದ ನಂತರ. ಅದೇ ರೀತಿ, ಮಹಿಳೆಯರು ವಿಳಂಬವಾಗಿ ತಾಯಿ ಆಗುವುದನ್ನು ನಿಷೇಧಿಸಬೇಡಿ ಎಂದು ಅವರು ಜನರನ್ನು ಒತ್ತಾಯಿಸಿದ್ದಾರೆ. “ನಾನು 36 ವಯಸ್ಸಿನಲ್ಲಿದ್ದೇನೆ ಅಥವಾ ಓ..! ನನ್ನ ಜೈವಿಕ ಗಡಿಯಾರವು ಸೂಕ್ಷ್ಮವಾಗುತ್ತಿದೆ. ಅದಕ್ಕೆ ನಾನು ಅವಸರಿಸಬೇಕು ಅಥವಾ ಇನ್ನಾವುದೋ ಕಾರಣಕ್ಕೆ ಮಗು ಮಾಡಿಕೊಳ್ಳಬೇಕು ಎಂದು ನಾನು ಯಾವತ್ತೂ ಯೋಜನೆ ಹಾಕಿಕೊಳ್ಳಲಿಲ್ಲ. ಅದೊಂದು ಆಲೋಚನೆ ಅಥವಾ ಚರ್ಚೆಯ ವಿಷಯವೂ ಆಗಿರಲಿಲ್ಲ.

ಏಕೆಂದರೆ ನಾನು ಸೈಫ್‍ನನ್ನು ಮದುವೆಯಾಗಿದ್ದು ಪ್ರೀತಿಗಾಗಿ. ನಾನು ಅದನ್ನು ಮಾಡಿದೆ. ನನಗೆ ಒಂದು ಮಗು ಬೇಕೆನಿಸಿತು. ಹಾಗಾಗಿ ಅದನ್ನೂ ಮಾಡಿಕೊಂಡೆ. ಹಾಗೆ ಆಯಿತು. ನಾನು ಹೆಚ್ಚು ಯೋಚಿಸಲಿಲ್ಲ, ಏಕೆಂದರೆ ನನ್ನ ಹೆಚ್ಚಿನ ಯೋಚನೆ ಕೆಲಸದ ಕಡೆಗೆ ಇತ್ತು ಮತ್ತು ನನ್ನಷ್ಟಕ್ಕೆ ಖುಷಿಯಾಗಿ ಹಾಗೂ ತೃಪ್ತಳಾಗಿರುವುದು ನನಗೆ ಗೊತ್ತಿದೆ. ಹಾಗಾಗಿ ವಿಳಂಬವಾಗಿ ತಾಯಿ ಆಗುವವರು ಈ ಒತ್ತಡವನ್ನು ಸಹಿಸಿಕೊಳ್ಳಬೇಕು ಎಂದು ನನಗನಿಸುವುದಿಲ್ಲ” ಎಂದು ಕರೀನಾ ಕಪೂರ್ ಹೇಳಿದ್ದಾರೆ.
ಕರೀನಾ ಕಪೂರ್ 2016ರಲ್ಲಿ ತಮ್ಮ ಮೊದಲ ಮಗು ತೈಮೂರ್‌ಗೆ ಜನ್ಮ ನೀಡಿದರು. ಆಗ ಅವರಿಗೆ 36 ವರ್ಷ ವಯಸ್ಸಾಗಿತ್ತು. ಜೆಹ್‍ಗೆ ಜನ್ಮ ನೀಡುವ ಮೂಲಕ ಆಕೆ ಮತ್ತೆ ತಾಯಿಯಾದರು.