ಹೊಸಕೇಟೆ: ಅವರು ಕಳೆದ ಐದಾರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆಕೆ ಮಾತ್ರ ಬೇರೊಂದು ಕಂಪನಿಗೆ ಕೆಲಸಕ್ಕೆ ಸೇರಿದ್ದಳು. ಜೊತೆಗೆ ಮದುವೆ ಕೂಡ ನಿಶ್ಚಯವಾಗಿತ್ತು. ಆತ ಮಾತ್ರ ಅದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈ ನಡುವೆ ನಡೆಯಬಾರದ ಘಟನೆ ನಡೆದುಹೋಗಿದೆ. ಆಕೆ ಕೊಲೆಯಾಗಿದ್ದರೆ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ (Bangalore Murder and Suicide Case). ಅಷ್ಟಕ್ಕೂ ಇಬ್ಬರ ಸಾವಿಗೆ ಕಾರಣವಾದ್ರೂ ಏನೂ ಅಂತೀರಾ…? ಈ ಸ್ಟೋರಿ ಓದಿ.
ಹೌದು ಹೀಗೆ ತಾನು ವಾಸವಾಗಿದ್ದ ಕೊಠಡಿಯಲ್ಲಿ ಕೊಲೆಯಾಗಿರುವ ಯುವತಿಯ ಹೆಸರು ಅಂಕೋಲಾ ಮೂಲದ ಉಷಾಗೌಡ. ಕೆರೆಯೊಂದರ ಬಳಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯ ಹೆಸರು ತಮಿಳುನಾಡು (Tamil Nadu) ಮೂಲದ ಗೋಪಾಲಕೃಷ್ಣ. ಇಬ್ಬರು ಹೊಸಕೋಟೆ (Hoskote) ಸಮೀಪದ ಪ್ಲಿಪ್ ಕಾರ್ಟ್ (Flipkart) ಕಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಉಷಾ ಸೆಕ್ಯೂರಿಟಿ ಗಾರ್ಡ್ ಆಗಿದ್ದರೆ ಗೋಪಾಲಕೃಷ್ಣ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ನೋಡಲು ಸುಂದರವಾಗಿದ್ದ ಉಷಾಳನ್ನು ಗೋಪಾಲಕೃಷ್ಣನಿಗೆ ಪ್ರೀತಿಸುತ್ತಿದ್ದ.

ಆದರೆ ಉಷಾ ಮಾತ್ರ ಕೇವಲ ಸ್ನೇಹಕ್ಕೆ ಮಾತ್ರ ಸೀಮಿತವಾಗಿದ್ದಳು. ಒಂದೆರಡು ಬಾರಿ ಗೋಪಾಲಕೃಷ್ಣ ವಾಸವಿದ್ದ ಚಿಕ್ಕಮ್ಮನ ಮನೆ ಗೆದ್ದಲಾಪುರಕ್ಕೆ ಹೋಗಿ ಬಂದಿರುತ್ತಾಳೆ. ಮಾತ್ರವಲ್ಲದೆ ಆಕೆಯ ಅಣ್ಣನು ಸಹ ಒಮ್ಮೆ ಹೋಗಿ ಬಂದಿರುತ್ತಾನೆ. ಎಲ್ಲವೂ ಚೆನ್ನಾಗಿರುವಾಗಲೇ ಉಷಾಗೆ ಮದುವೆ ನಿಶ್ಚಯವಾಗಿದೆ. ಜೊತೆಗೆ ಆಕೆ ಪ್ಲಿಪ್ ಕಾರ್ಟ್ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಅಂದಹಾಗೆ ಗೋಪಾಲಕೃಷ್ಣ ತನ್ನನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿದು ಬೇರೊಂದು ಕಂಪನಿಗೆ ಉಷಾ ಸೇರಿಕೊಂಡಿದ್ದಳು ಎನ್ನಲಾಗಿದೆ.