ಕೆಲವರಿಗೆ ಜೀವನದಲ್ಲಿ ಒಮ್ಮೆಯಾದರು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸಿರುತ್ತದೆ. ಇನ್ನು ಕೆಲವರಿಗೆ ಸ್ವಂತ ವಿಮಾನ ಖರೀದಿಸಬೇಕೆಂಬ ಆಸೆಯಿರುತ್ತದೆ. ಭಾರತದ ಕೆಲವು ಉದ್ಯಮಿಗಳು ಮತ್ತು ಸ್ಟಾರ್ ನಟರ ಬಳಿ ಸ್ವಂತ ವಿಮಾನವಿದೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗಿರುವಾಗ ಸಾಮಾನ್ಯನಿಗೂ ನಾನೊಂದು ವಿಮಾನ ಖರೀದಿಸಿದರೆ ಹೇಗಿರುತ್ತೆ ಎಂಬ ಪ್ರಶ್ನೆ ತಲೆಯಲ್ಲಿ ಮೂಡಬಹುದು..ಅದಕ್ಕೆ ಚಿಂತೆ ಬೇಡ ಸಾಲ ಪಡೆಯುವ ಮೂಲಕ ಯಾರು ಬೇಕಾದರು ವಿಮಾನ ಖರೀದಿಸಬಹುದು!
ಖಾಸಗಿ ವಿಮಾನ ಖರೀದಿಸುವಾಗ ಅದಕ್ಕೆ ಬೆಲೆಗೆ ಅನುಗುಣವಾಗಿ ಖರೀದಿಸಬೇಕಾಗಿದೆ. ಅಂದರೆ ವಿಮಾನದ ಕಂಪನಿ, ಅದರ ಗಾತ್ರ, ಆಸನ ವ್ಯವಸ್ಥೆ, ವೈಶಿಷ್ಟ್ಯತೆಗಳಯ, ಇನ್ನಿತರ ಸೌಕರ್ಯಗಳ ಬಗ್ಗೆ ತಿಳಿಯುದರೊಂದಿಗೆ ವಿಮಾನದ ಬೆಲೆ ನಿದಗಿಯಾಗುತ್ತದೆ. ಬೋಯಿಂಗ್ ಸಂಸ್ಥೆ ವಿಮಾನ ತಯಾರಿಸುವ ವಿಶ್ವದದ ದೊಡ್ಡ ಕಂಪನಿಯಾಗಿದೆ. ಅಮೆರಿಕ ಮೂಲಕ ಈ ಕಂಪನಿ ವಿಶ್ವದಾದ್ಯಂತ ವಿಮಾನವನ್ನು ಪೂರೈಸುತ್ತದೆ.
ಭಾರತವು ಬೋಯಿಂಗ್ ವಿಮಾನವನ್ನು ಬಳಸುತ್ತಾ ಬಂದಿದೆ. ವೈಶಿಷ್ಯ ಮತ್ತು ಸೌಕರ್ಯ ವಿಚಾರವನ್ನು ಆಧರಿಸಿದ ದುಬಾರಿ ವಿಮಾನಗಳು ಭಾರತದಲ್ಲಿದೆ. 3.5 ಕೋಟಿ ವೆಚ್ಚದಿಂದ ಹಿಡಿದು ಸುಮಾರು 775 ಕೋಟಿ ಬೆಲೆಯ ವಿಮಾನಗಳು ವಿಶ್ವದಲ್ಲಿದೆ. ಹಾಗಾಗಿ ವಿಮಾನ ಖರೀದಿಸಲು ಹಣ ತುಂಬಾನೆ ಅಗತ್ಯವಾಗಿದ್ದು, ಖರೀದಿಸುವ ಮನಸ್ಸಿ್ದರೆ ಸಾವಿರ ಕೋಟಿ ಕ್ಲಬ್ನಲ್ಲಿ ನೀವು ಗುರುತಿಸಿಕೊಂಡಿರಬೇಕು.