ವದೆಹಲಿ (ಅ.27): ನಾಳೆಯಿಂದ ಮೂರು ದಿನಗಳ ಕಾಲ ಅಂದರೆ ಅ. 28, 29 ಮತ್ತು 30 ರಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ (Rashtriya Swayamsevak Sangh) ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್ ನಡೆಯಲಿದೆ. ಧಾರವಾಡದ ಧಾರವಾಡದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಈ ಬೈಠಕ್ ನಡೆಯಲಿದ್ದು, ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat ) ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale), ಬಿಜೆಪಿ ಮುಖ್ಯ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಸೇರಿದಂತೆ 356ಕ್ಕೂ ಹೆಚ್ಚು ಕಾರ್ಯಕರ್ತರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಿಂದ ಯಾವುದೇ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸದ ಎಸ್ಎಸ್ಎಸ್ ನಾಳೆ ಸಭೆಗೆ ಮುಂದಾಗಿದೆ. ಸಭೆಯಲ್ಲಿ ಸಂಘದ ಮುಂದಿನ ಯೋಜನೆ ಜೊತೆಗೆ ಅನೇಕ ಪ್ರಮುಖ ವಿಚಾರ ಪ್ರಸ್ತಾಪಗೊಳ್ಳಲಿದೆ.
ಹೀಗಿದೆ ಪ್ರಮುಖ ಮಾರ್ಗ ಸೂಚಿ
ಕಾರ್ಯ ಕಾರಿಣಿಯಲ್ಲಿ ಪ್ರಮುಖವಾಗಿದೆ ಬಾಂಗ್ಲಾದೇಶದಲ್ಲಿ ದಾಳಿಗೊಳಗಾದ ಹಿಂದೂಗಳ ಕುರಿತ ನಿರ್ಣಯ, ಇಂಧನ ಬೆಲೆ ಏರಿಕೆ ಕುರಿತ ಚರ್ಚೆ ಮತ್ತು ಐದು ರಾಜ್ಯಗಳ ಚುನಾವಣೆಗೆ ಮುನ್ನ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಲಿದೆ. ಸಭೆಯ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ದಾಳಿಗೆ ಒಳಗಾಗಿರುವ ಹಿಂದೂಗಳ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಆರ್‌ಎಸ್‌ಎಸ್ ಪ್ರತಿನಿಧಿಗಳು ತಿಳಿಸಿದ್ದಾರೆ.
ದುರ್ಗಾ ಪೂಜೆ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಆರ್‌ಎಸ್‌ಎಸ್ ನಾಯಕರು ಸೇರಿದಂತೆ ಅನೇಕ ಬಿಜೆಪಿ ನಾಯಕರು ಕೂಡ ಟೀಕಿಸಿದ್ದರು.