Beard Olympics: ನಿಮಗೆ ಒಲಿಂಪಿಕ್ಸ್ ಗೊತ್ತು. ಪ್ಯಾರಾ ಒಲಿಂಪಿಕ್ಸ್ ಗೊತ್ತು. ಆದರೆ ನೀವು ಯಾವತ್ತಾದರೂ ಗಡ್ಡಕ್ಕೂ ಒಲಿಂಪಿಕ್ಸ್ ನಡೆಸುತ್ತಾರೆ ಅನ್ನೋದು ಗೊತ್ತಾ? ಶಾಕ್ ಆಗಬೇಡಿ ಜಮರ್ನಿಯಲ್ಲಿ ಇತ್ತೀಚೆಗೆ ಇಂತದ್ದೊಂದು ಒಲಿಂಪಿಕ್ಸ್ ನಡೆದಿದೆ.
ಭಾರತದ(India)ಲ್ಲಿ ಕೆಜಿಎಫ್(KGF) ಸಿನಿಮಾ ಬಂದ ನಂತರ ಎಲ್ಲರೂ ಯಶ್(Yash) ಹಾಗೇ ಗಡ್ಡ(Beard), ಮೀಸೆ(Moustache) ಬಿಡುವುದಕ್ಕೆ ಶುರುಮಾಡಿದ್ದರು. ಆದರೆ ವಿದೇಶಗಳಲ್ಲಿ ವಿಶಿಷ್ಟ ರೀತಿಯ ಗಡ್ಡ, ಮೀಸೆ ಬಿಡುವ ಟ್ರೆಂಡ್ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.
ನಿಮಗೆ ಒಲಿಂಪಿಕ್ಸ್ ಗೊತ್ತು. ಪ್ಯಾರಾ ಒಲಿಂಪಿಕ್ಸ್ ಗೊತ್ತು. ಆದರೆ ನೀವು ಯಾವತ್ತಾದರೂ ಗಡ್ಡಕ್ಕೂ ಒಲಿಂಪಿಕ್ಸ್ ನಡೆಸುತ್ತಾರೆ ಅನ್ನೋದು ಗೊತ್ತಾ? ಶಾಕ್ ಆಗಬೇಡಿ ಜಮರ್ನಿಯಲ್ಲಿ ಇತ್ತೀಚೆಗೆ ಇಂಥದ್ದೊಂದು ಒಲಿಂಪಿಕ್ಸ್ ನಡೆದಿದೆ.
ಜರ್ಮನಿಯ ಪುಲ್ ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್ ಪಾರ್ಕ್‌ನಲ್ಲಿ ಗಡ್ಡದ ಒಲಿಂಪಿಕ್ಸ್ ನಡೆದಿದೆ. ಪೂರ್ವ ಬವಾರಿಯನ್ ಗಡ್ಡ ಮತ್ತು ಮೀಸೆಯ ಕ್ಲಬ್ ಈ ಒಲಿಂಪಿಕ್ಸ್‌ನ್ನು ಆಯೋಜಿಸಿತ್ತು.