Motor Vehicles Act: ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ (Two-wheelers) ಕರೆದುಹೋಗುವಾಗ 40ಕಿ.ಮೀ ವೇಗದಲ್ಲಿಯೇ ಸಾಗಬೇಕು. ಅಕಸ್ಮಾತ್ ಹೆಚ್ಚಿನ ವೇಗದಲ್ಲಿ ತೆರಳಿದ್ದಲ್ಲಿ ಅದು ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಈ ಕುರಿತು ಈಗಾಗಲೇ ರಸ್ತೆ ಸಾರಿಗೆ ಸಚಿವಾಲಯವು (Ministry of Road Transport) ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಪ್ರಸ್ತಾವನೆ ಮುಂದಿಟ್ಟಿದೆ. ಜೊತೆಗೆ 9 ತಿಂಗಳಿನಿಂದ 4 ವರ್ಷದ ನಡುವಿನ ಮಕ್ಕಳು ಹಿಂದಿನ ಸವಾರರಾಗಿದ್ದಲ್ಲಿ ಕ್ರಾಶ್ ಹೆಲ್ಮೆಟ್ (Helmet) ಧರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿನ (Motor Vehicles Act) ಇತ್ತೀಚಿನ ಬದಲಾವಣೆಗೆ ಅನುಗುಣವಾಗಿ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ಮಾಡಲು ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ನಿಯಮಗಳ ಉಲ್ಲಂಘನೆಗೆ 1,000 ರೂ. ದಂಡ ಮತ್ತು 3 ತಿಂಗಳವರೆಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
ಕರಡು ಅಧಿಸೂಚನೆಯ ಪ್ರಕಾರ, ನಾಲ್ಕು ವರ್ಷದೊಳಗಿನ ಹಿಂದಿನ ಸವಾರ ಇರುವ ಮೋಟಾರ್ ಸೈಕಲ್‍ನ ಚಾಲಕ, ಮಗುವನ್ನು ಚಾಲಕನಿಗೆ ಜೋಡಿಸಲು ಸುರಕ್ಷತಾ ಸರಂಜಾಮು ಬಳಸಬೇಕಾಗುತ್ತದೆ. ಸುರಕ್ಷತಾ ಸರಂಜಾಮುಗಳನ್ನು ಮಗುವು ಧರಿಸಬೇಕಾದ ಹೊಂದಾಣಿಕೆಯ ಉಡುಪೆಂದು ವ್ಯಾಖ್ಯಾನಿಸಲಾಗಿದೆ. ಜೊತೆಗೆ ಒಂದು ಜೋಡಿ ಪಟ್ಟಿಗಳನ್ನು ಆ ಉಡುಪಿನ ಮಧ್ಯೆ ಜೋಡಿಸಲಾಗಿದೆ ಮತ್ತು ಡ್ರೈವರ್ ಧರಿಸಲು ಭುಜದ ಕುಣಿಕೆಗಳನ್ನು ರೂಪಿಸುತ್ತದೆ.