Health Tips: ಸಾಕಷ್ಟು ಜನರಿಗೆ ರಾತ್ರಿ ವೇಳೆ ಇಷ್ಟದ ತಿಂಡಿ ಸೇವಿಸುವ ಅಭ್ಯಾಸವಿರುತ್ತದೆ. ಹೀಗಾಗಿಯೇ ಅವರು ಹೆಚ್ಚಾಗಿ ರಾತ್ರಿವೇಳೆಯೇ ಸೇವಿಸುತ್ತಾರೆ. ಆದರೆ, ರಾತ್ರಿ ಊಟದ ವೇಳೆ ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋದನ್ನು ಅರಿಯುವ ಅಗತ್ಯವಿದೆ. ಕೆಲವು ಆಹಾರವನ್ನು ರಾತ್ರಿವೇಳೆ ಸೇವಿಸಿದರೆ, ಅನಾರೋಗ್ಯದ ಜತೆಗೆ ದೇಹದ ತೂಕವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ನಾವು ಸೇವಿಸುವ ಹಾಗೂ ಇಷಟ ಪಡುವ ಆಹಾರವೇ ನಮ್ಮ ಆರೋಗ್ಯ ಹೇಗಿರುತ್ತದೆ ಅನ್ನೋದನ್ನು ನಿರ್ಧರಿಸಸುತ್ತದೆ. ಅದಕ್ಕೆ ಡಯಟ್ ವಿಷಯದಲ್ಲಿ ತುಂಬಾ ಜಾಕರೂಕರಾಗಿ ಇರಬೇಕೆಂದು ವೈದ್ಯರು ಸೂಚಿಸುತ್ತಾರೆ. ಕೆಲವು ಆಹಾರಗಳನ್ನು ರಾತ್ರಿವೇಳೆ ಸೇವಿಸಲೇ ಬಾರದು ಅನ್ನೋ ವಿಷಯ ನಮಗೆ ತಿಳಿಯದು.
ತುಂಬಾ ಜನರಿಗೆ ರಾತ್ರಿವೇಳೆ ಐಸ್ಕ್ರೀಮ್ ತಿನ್ನುವುದು ಎಂದರೆ ಬಲು ಪ್ರೀತಿ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ. ಇದರಲ್ಲಿ ಇರುವ ಅತಿಯಾದ ಸಕ್ಕರೆ ರಾತ್ರಿಯ ಸಖಕರ ನಿದ್ದೆಯನ್ನು ಹಾಳು ಮಾಡುತ್ತವೆ. ಜೀರ್ಣಕ್ರಿಯೆ ಸಹ ತುಂಬಾ ಸಮಯ ತೆಗೆದುಕೊಳ್ಳುತ್ತದೆ.