ರಾಜ್ಯಸುದ್ದಿ

ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯ ನಿರ್ವಹಿಸುವುದಿಲ್ಲ..!

ಜನಪ್ರಿಯ WhatsApp ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿದೆ. ಅದಕ್ಕೆ ತಕ್ಕಂತೆ ವಾಟ್ಸ್​ಆ್ಯಪ್ ಕೂಡ ಬೇಕೆನಿಸಿದ ಮತ್ತು ಅವಶ್ಯಕತೆಯಿರುವ ಫೀಚರ್​ಗಳನ್ನು ಅಪ್ಲಿಕೇಶನ್​ನಲ್ಲಿ ನೀಡುತ್ತಾ ಬಂದಿದೆ. ಮಾತ್ರವಲ್ಲದೆ​ ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸದಾ ಜನಪ್ರಿಯತೆಗಳಿಸುತ್ತಾ ಬಂದಿದೆ. ಆದರೆ ವಾಟ್ಸ್​ಆ್ಯಪ್ ಕೆಲವೊಂದು ಸಾಧನಗಳಲ್ಲಿ ​ ಬೆಂಬಲ ಸೂಚಿಸುವುದಿಲ್ಲವೆಂದಿದೆ. ನವೆಂಬರ್​ 1 ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ವಾಟ್ಸ್​ಆ್ಯಪ್​ ನವೆಂಬರ್​ 1 ರಿಂದ ಕೆಲವೊಂದು ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ ತಿಳಿಸಿದೆ. ಆ್ಯಂಡ್ರಾಯ್ಡ್​ 4.0.3 ಅಥವಾ ಅದಕ್ಕಿಂತ ಹಳೆಯ ಮತ್ತು ಐಒಎಸ್​ 9 ಹಾಗೂ ಅದಕ್ಕಿಂತ ಹಳೆಯ ಫೋನ್​ಗಳಿಗೆ ಬೆಂಬಲ ಸೂಚಿಸುವುದಿಲ್ಲ ಎಂದಿದೆ. ಅಷ್ಟು ಮಾತ್ರವಲ್ಲದೆ ಬೆಂಬಲ ಸೂಚಿಸದ ಕೆಲವೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಾಟ್ಸ್​ಆ್ಯಪ್ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಫೋನ್‌ಗಳ (Android) ಪಟ್ಟಿಯಲ್ಲಿ ಸ್ಯಾಮ್‌ಸಂಗ್ (Samsung), ಎಲ್‌ಜಿ (LG), TEಡ್‌ಟಿಇ, ಹುವಾವೇ, ಸೋನಿ (Sony), ಅಲ್ಕಾಟೆಲ್ ಮತ್ತು ಇತರವುಗಳ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಮತ್ತೊಂದೆಡೆ, ಐಫೋನ್​ಗಳು- ಐಫೋನ್ ಎಸ್ಇ, ಐಫೋನ್ 6 ಎಸ್ ಮತ್ತು ಐಫೋನ್ 6 ಎಸ್ ಅನ್ನು ಒಳಗೊಂಡಿವೆ.

ಸ್ಯಾಮ್‌ಸಂಗ್‌ಗಾಗಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಟ್ರೆಂಡ್ II, ಗ್ಯಾಲಕ್ಸಿ SII, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ ಎಕ್ಸ್‌ಕವರ್ 2, ಗ್ಯಾಲಕ್ಸಿ ಕೋರ್ ಮತ್ತು ಗ್ಯಾಲಕ್ಸಿ ಏಸ್ 2 ನವೆಂಬರ್ ವೇಳೆಗೆ ಬೆಂಬಲವನ್ನು ಕಳೆದುಕೊಳ್ಳುತ್ತವೆ.

Related Articles

Leave a Reply

Your email address will not be published. Required fields are marked *

Back to top button