ಹಾಸನ : 45 ವರ್ಷ ದುಡಿದ್ದಿದ್ದೇನೆ, 40 ಲಕ್ಷಕ್ಕಿಂತ ಹೆಚ್ಚು ಎಕರೆ ಪ್ರದೇಶಗಳಿಗೆ ನೀರಾವರಿ, ಬೇರೆ ಬೇರೆ ಯೋಜನೆಗಳನ್ನು ನೀಡಿದ್ದೇನೆ. ಅದಕ್ಕೆ ಯಾವುದೇ ಚುನಾವಣೆಗೂ (By Election) ನಾನು ಹೋಗಿಲ್ಲ ಎಂದು ಗುಬ್ಬಿಯಲ್ಲಿ ನಡೆದ ಜೆಡಿಎಸ್(JDS) ಸಮಾವೇಶ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (hd Deve Gowda) ಹೇಳಿಕೆ ನೀಡಿದರು. ಸಿಂಧಗಿಯಲ್ಲಿ ನಾನೇ ರಾಜಕೀಯಕ್ಕೆ ತಂದ ವ್ಯಕ್ತಿ ಮನುಗೂಳಿ ನಿಂತಿದ್ದಾರೆ. ಕುಮಾರಣ್ಣನ (HD Kumarswamy) ಸರ್ಕಾರದಲ್ಲಿ ಅವರು ಮಂತ್ರಿಯಾಗಿದ್ದರು. ಅವರ ಮಗ ನಮ್ಮ ತಂದೆ ಹೇಳಿದ್ದಾರೆ ಕಾಂಗ್ರೆಸ್ ಗೆ ಹೋಗು ಅಂಥಾ ಅದಕ್ಕೆ ಹೋಗಿದ್ದಾರೆ. ಹೀಗಂತ ಕಾಂಗ್ರೆಸ್ ನವರು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆಶೀರ್ವಾದ ಮಾಡಿ ಅಂತ ಕೇಳುವ ಕೆಲಸ ಮಾಡುತ್ತಿದ್ದೇನೆ ಅಷ್ಟೇ
ನಮ್ಮ ಪಕ್ಷದ ಮುಖಂಡರೆಲ್ಲಾ ಸೇರಿ ಒಬ್ಬ ಹೆಣ್ಣುಮಗಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಕೊನೆಗಳಿಗೆವರೆಗೂ ನಾನು ಮಾಡಿರುವ ಕೂಲಿ ಕೆಲಸಕ್ಕೆ ಆಶೀರ್ವಾದ ಮಾಡಿ ಅಂತ ಕೇಳುವ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಮಿಕ್ಕಿದೆಲ್ಲಾ ಕುಮಾರಸ್ವಾಮಿ ಅವರಿಗೆ ಸೇರಿದ್ದು. ನಾನು ವಿಷಯನ್ನು ಇನ್ನೂ ಪೂರ್ತಿ ತಿಳ್ಕೊಂಡಿಲ್ಲ. ಜಿ.ಪಂ. ಸದಸ್ಯರೊಬ್ಬರು ಪಕ್ಷಕ್ಕೆ ಸೇರ್ತರೆ ಅಂಥಾ ಗೊತ್ತಾಗಿದೆ. ಅದರಿಂದ ಕುಮಾರಸ್ವಾಮಿ ಹೋಗಿದ್ದಾರೆ ಅಂಥಾ ಕೇಳಿದಿನಿ ಎಂದರು. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕರೆದುಕೊಂಡು ಬಂದು ಸಿಂಧಗಿಯಲ್ಲಿ ಬೆಳೆಸಿದೆ. ಇಡೀ ಪಕ್ಷ ವಿರೋಧ ಮಾಡಿತ್ತು, ಇವರಿಗೆ ಸೀಟ್ ಕೊಡಬಾರದು ಅಂದಾಗಲು ಎರಡು ಸಾರಿ ಮಂತ್ರಿ ಮಾಡಿದ್ದೆ. ಅವರ ಮಗ ಹೋಗಿ ಕಾಂಗ್ರೆಸ್ ಗೆ ಸೇರಿದ್ದಾನೆ. ಆದ್ದರಿಂದ ನಾನು ವೈಯುಕ್ತಿಕವಾಗಿ ಕೆಲಸ ಮಾಡಿತ್ತೇನೆ, ಇದರ ಹೊರತು ಯಾವುದೇ ಉಪಚುನಾವಣೆಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾನು ಆ ಮಟ್ಟಕ್ಕೆ ಇಳಿಯುದಿಲ್ಲ
ರಾಜಕೀಯ ಮುಖಂಡರ ವೈಯುಕ್ತಿಕ ನಿಂದನೆ ವಿಚಾರವಾಗಿ ದೇವೇಗೌಡರು ವಿಷಾದ ವ್ಯಕ್ತಪಡಿಸಿದರು. ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ, ಯಾರೂ ಈ ಮಟ್ಟಕ್ಕೆ ಇಳಿಯುತ್ತಾರೋ ಅವರಲ್ಲಿ ವಿನಂತಿ ಮಾಡ್ತಿನಿ. ನಿಮ್ಮ ನಡವಳಿಕೆಯಲ್ಲಿ ಮಾರ್ಪಾಡು ಮಾಡಿಕೊಳ್ಳಿ ಅಂಥಾ ವಿನಂತಿ ಮಾಡಿಕೊಳ್ಳುತ್ತೇನೆ ಅಷ್ಟೇ. ರಾಜಕೀಯ ವ್ಯವಸ್ಥೆ ತಳಮಟ್ಟಕ್ಕೆ ಹೋಗಿದೆ. ದೇಶದ ಒಬ್ಬ ಮಾಜಿ ಪ್ರಧಾನಿ ಆಗಿ ಆರವತ್ತು ವರ್ಷ ಕಳೆದಿದ್ದೇನೆ. ಒಬ್ಬ ಶಾಸಕನಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಇದನ್ನೆಲ್ಲಾ ಲೈಕ್ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.