ರಾಜ್ಯಸುದ್ದಿ

Dating Website:ಡೇಟಿಂಗ್ ಮಾಡೋಕೆ ಹುಡುಗಿಯರೇ ಇಲ್ಲ, ಎಲ್ಲರೂ ಮೋಸ ಮಾಡ್ತಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ ಯುವಕ!

ಡೇಟಿಂಗ್​ ಆ್ಯಪ್(Dating apps)​​ಗಳು ಕಳೆದ ಕೆಲವು ವರ್ಷಗಳಿಂದ ಸಂಬಂಧಗಳ(Relationship) ರೂಪುರೇಷೆಗಳನ್ನೇ ಬದಲಾಯಿಸಿಬಿಟ್ಟಿವೆ. ಇವತ್ತಿಗೂ ಬಹಳಷ್ಟು ಮಂದಿ , ಸ್ನೇಹಿತ(Friends)ರ ಅಥವಾ ಕುಟುಂಬದ(Family)ವರ ಮೂಲಕ ಪರಸ್ಪರ ಪರಿಚಯವಾದ ಬಳಿಕ ಡೇಟಿಂಗ್ ಹೋಗುವ ಹಳೆಯ ಶೈಲಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೂ ಈ ಮಧ್ಯೆ ಅಪ್ಲಿಕೇಶನ್‍ಗಳು(Applications) ಮತ್ತು ವೆಬ್‍ಸೈಟ್‍ಗಳು(Websites) ಡೇಟಿಂಗ್ ಶೈಲಿ(Dating Style)ಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿದ್ದು, ಮರು ವ್ಯಾಖ್ಯಾನ ಮಾಡಿವೆ. ಈ ಫಾಸ್ಟ್​ಫುಡ್(Fast-food)​ ಜಮಾನದಲ್ಲಿ ಈಗಿನ ಯುವಕ-ಯುವತಿಯರು ಫಾಸ್ಟ್​ ಆಗಿ ಕೆಲಸ ಮಾಡುತ್ತಾರೆ.

ಒಬ್ಬ ಹುಡುಗ ಮತ್ತು ಹುಡುಗಿ , ಫೋನ್‍ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಪರಿಚಿತರಾಗುತ್ತಾರೆ. ಒಂದು ವೇಳೆ ಒಬ್ಬರಿಗೊಬ್ಬರು ‘ಮ್ಯಾಚ್’ ಆಗುತ್ತಾರೆ ಎಂದಾದರೆ, ಇಬ್ಬರೂ ಡೇಟ್‍ಗೆ ಹೋಗುತ್ತಾರೆ, ಮಾತ್ರವಲ್ಲ ಬಯಸಿದರೆ ಮದುವೆ(Marriage) ಕೂಡ ಆಗಿ ಸುಖವಾಗಿ ಬದುಕುವುದೂ ಕೂಡ ಈ ಡೇಟಿಂಗ್​ ಆ್ಯಪ್​ಗಳಿಂದ ಸಾಧ್ಯವಿದೆ.ಆದರೆ ಇಂತಹ ಡೇಂಟಿಗ್​ ವೆಬ್​ಸೈಟ್​ ಮೇಲೆ ಕೇಸ್(Case)​ ಹಾಕಲು ಯುವಕನೊಬ್ಬ ನಿರ್ಧರಿಸಿದ್ದಾನೆ. ಅದು ಯಾಕೆ ಅಂತೀರಾ? ಮುಂದೆ ಓದಿ..

ಮಹಿಳೆಯರ ಕೊರತೆಯಿದೆ ಎಂಬ ಆರೋಪ

ಹೌದು, ಅಮೆರಿಕದ ಡೆನ್ವರ್ ಮೂಲದ ಡೇಟಿಂಗ್ ವೆಬ್‍ಸೈಟ್ ಒಂದರ ಡಾಟಾ ಬೇಸ್‍ನಲ್ಲಿ ಮಹಿಳೆಯರ ಕೊರತೆ ಇದೆ ಎಂದು ಆರೋಪಿಸಿ, ವ್ಯಕ್ತಿಯೊಬ್ಬರು ಆ ವೆಬ್‍ಸೈಟ್‍ನ ಮೇಲೆ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಡೆನ್ವರ್ ಪೋಸ್ಟ್ ವರದಿಯ ಪ್ರಕಾರ, ವೆಬ್‍ಸೈಟ್‍ನಲ್ಲಿ ಕೆಲವೇ ಮಹಿಳೆಯರು ಇದ್ದಾರೆ ಎಂದು ಆರೋಪಿಸಿ ಗ್ರಾಹಕರೊಬ್ಬರು ಮೊಕದ್ದಮೆ ಹೂಡಿದ್ದಾರೆ. ಆ ಮೊಕದ್ದಮೆಯಲ್ಲಿ, 29 ವರ್ಷದ ಇಯಾನ್ ಕ್ರಾಸ್ ಎಂಬಾತ, ಡೆನ್ವರ್ ಡೇಟಿಂಗ್ ಕೋ. ನಡೆಸುತ್ತಿರುವ ಹೆಚ್‍ಎಮ್‍ಝೆಡ್ ಗ್ರೂಪ್ ತನ್ನ ಡಾಟಾಬೇಸ್‍ನ ನಿಜವಾದ ಸ್ವರೂಪವನ್ನು ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button