ರಾಜ್ಯಸುದ್ದಿ

2019ರ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು: ಸತ್ಯ ಬಿಚ್ಚಿಟ್ಟ ಫೇಸ್​ಬುಕ್..!

ನವ ದೆಹಲಿ (ಅಕ್ಟೋಬರ್​ 25); 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election 2019) ಬಿಜೆಪಿ (BJP) ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಬಹುಮತದೊಂದಿಗೆ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿತ್ತು. ಆದರೆ, ಈ ವೇಳೆ ಬಿಜೆಪಿ ಐಟಿ ಸೆಲ್​ (BJP IT Cell) ಸಾಮಾಜಿಕ ಜಾಲತಾಣಗಳನ್ನು (Social Media) ಬಳಸಿಕೊಂಡು ಸಾಕಷ್ಟು ಸುಳ್ಳು ಸುದ್ದಿಗಳನ್ನು (Fake News) ಹರಡಿತ್ತು. ಈ ಮೂಲಕ ಮತಗಳನ್ನು ಪಡೆದಿತ್ತು ಎಂಬ ಆರೋಪ ಇದೆ.

ಹಲವು ಪ್ರಗತಿಪರ ಹೋರಾಟಗಾರರು ಮತ್ತು ಸಂಘನೆಗಳು ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಗಂಭೀರ ಆರೋಪಗಳನ್ನು ಮುಂದಿಡುತ್ತಲೇ ಇವೆ. ಆದರೆ, ಮೊದಲ ಬಾರಿಗೆ ಮೌನ ಮುರಿದಿರುವ ಫೇಸ್​ಬುಕ್ (FaceBook), 2019ರ ಫೆಬ್ರುವರಿಯಲ್ಲಿ ಹೇಗೆ ಭಾರತದಲ್ಲಿ ಫೇಕ್‌ನ್ಯೂಸ್‌ಗಳು ಶರವೇಗದಲ್ಲಿ ಹರಿದಾಡಿವೆ ಎಂದು ಹೇಳಿಕೊಂಡಿದೆ. ಕೇವಲ 21 ದಿನಗಳಲ್ಲಿ ಭಾರತದಲ್ಲಿ ಆಲ್ಗರಿದಂ ಹೇಗೆ ವೇಗವಾಗಿ ಬೆಳೆದಿತ್ತು ಎಂಬುದನ್ನು ಫೇಸ್‌ಬುಕ್‌ ಸಂಸ್ಥೆ ಪರಿಶೀಲಿಸಿದ್ದು, ಫೇಸ್‌ಬುಕ್‌ ಸಿಬ್ಬಂದಿಗಳು ಈ ಬಗ್ಗೆ ದಿಗ್ಭ್ರಾಂತರಾಗಿದ್ದಾರೆ ಎನ್ನಲಾಗಿದೆ.

ಫೇಸ್​ಬುಕ್ ಹೇಳಿರುವುದು ಏನು?

“2019 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇವಲ ಮೂರು ವಾರಗಳಲ್ಲಿ ಹೊಸ ಬಳಕೆದಾರರು ಸುಳ್ಳು ಸುದ್ದಿಗಳನ್ನು, ಪ್ರಚೋದನಕಾರಿ ಚಿತ್ರಗಳನ್ನು ಅತಿ ಹೆಚ್ಚು ಹಂಚಿಕೊಂಡಿದ್ದಾರೆ. ಶಿರಚ್ಛೇದದ ಗ್ರಾಫಿಕ್‌ ಫೋಟೋಗಳು, ಪಾಕಿಸ್ತಾನದ ಮೇಲೆ ಭಾರತದ ನಡೆಸಿದೆ ಎನ್ನಲಾದ ವೈಮಾನಿಕ ದಾಳಿಯ, ಹಿಂಸಾಕೃತ್ಯದ ಗ್ರಾಫಿಕ್‌ ಫೋಟೋಗಳನ್ನು ಹರಿಬಿಡಲಾಯಿತು. ಪಾಕಿಸ್ತಾನದಲ್ಲಿ 300 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬ ನಕಲಿ ಸುದ್ದಿಯನ್ನು ಹಂಚಿದ ಒಂದು ಗುಂಪು ನಗೆಪಾಟಲಿಗೆ ಈಡಾಗಿತ್ತು” ಎಂದು ಫೇಸ್‌ಬುಕ್‌ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಸಂಶೋಧನಾ ಟಿಪ್ಪಣಿಯಲ್ಲಿ ಏನಿದೆ?

ವಿಷಲ್‌ಬ್ಲೋವರ್‌‌ (ನಕಲಿ ಖಾತೆಗಳನ್ನು ಪತ್ತೆ ಹಚ್ಚುವವವರು) ಫ್ರಾನ್ಸ್‌ ಹೌಗನ್‌ ನೀಡಿರುವ 46 ಪುಟಗಳ ಸಂಶೋಧನಾ ಟಿಪ್ಪಣಿಯಲ್ಲಿ, “ನನ್ನ ಜೀವಿತಾವಧಿಯಲ್ಲಿ ನೋಡಿರದಿದ್ದಷ್ಟು ಸತ್ತವರ ಫೋಟೋಗಳನ್ನು ಕೇವಲ ಮೂರು ವಾರಗಳಲ್ಲಿ ನೋಡಿದೆ” ಎಂದು ಸಿಬ್ಬಂದಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button