ಗುರುಗ್ರಾಮ್‌ನಲ್ಲಿರುವ ಬೃಹತ್ ಗಾಜು ಮತ್ತು ಉಕ್ಕಿನ ಕಟ್ಟಡವುಳ್ಳ ಸೊಗಸಾದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ವಿನೀತ್ ಕುಮಾರ್, ಸುಮಾರು ಎರಡು ವರ್ಷಗಳಿಂದ, ಪಂಜಾಬ್‌ನ ಗುರುದಾಸ್‌ಪುರ್‌ನಲ್ಲಿ ತಾವು ಹುಟ್ಟಿ ಬೆಳೆದ ಊರಿನಲ್ಲಿದ್ದಾರೆ. ಏಕೆಂದರೆ, ಈಗ ಕೊರೊನಾ ಕಾರಣದಿಂದ ಕಚೇರಿಗಳು ಬಂದ್ ಆಗಿದ್ದು, ವರ್ಕ್ ಫ್ರಮ್ ಹೋಂ (Work From Home) ನಡೆಯುತ್ತಿದೆ. ಆದರೆ, ಕಳೆದ ತಿಂಗಳು, ಕುಮಾರ್ ಕುಟುಂಬದ ತುರ್ತು ಎಮರ್ಜೆನ್ಸಿಗಾಗಿ ಸಾಂಕ್ರಾಮಿಕ ರೋಗದ ಆರಂಭದ ನಂತರ ಮೊದಲ ಬಾರಿಗೆ ವಿಮಾನವೇರಿದರು (Flight). ಹತ್ತಿರದ ಅಮೃತಸರ ವಿಮಾನ ನಿಲ್ದಾಣದಿಂದ (Airport) ಮುಂಬೈಗೆ ಏರ್ ಇಂಡಿಯಾ (Air india) ವಿಮಾನದಲ್ಲಿ ಹಾರಿದರು. ಇಂಡಿಗೋ ವಿಮಾನದಲ್ಲಿ (Indigo Airlines) ಬೆಳಗ್ಗಿನ ಜಾವ ವಾಪಸಾದರು. ಈ ವೇಳೆ ‘’ವಿಮಾನಗಳು ಭರ್ತಿಯಾಗಿದ್ದವು’’ ಎಂದು 35 ವರ್ಷದ ಕುಮಾರ್ ಹೇಳಿದ್ದರು. ಅಲ್ಲದೆ, ಹಿಂದಿರುಗುವಾಗ ಕೊನೆಯ ಸಾಲುಗಳಲ್ಲಿ ಮಧ್ಯದ ಸೀಟು ಖಾಲಿಯಾಗಿತ್ತು ಎಂದಿದ್ದರು.
ವಾಸ್ತವವಾಗಿ, ಕುಮಾರ್ ಅವರ ಈ ಅನುಭವ ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳ ವಿಡಿಯೋಗಳು ಮತ್ತು ದೆಹಲಿ ವಿಮಾನ ನಿಲ್ದಾಣವು ಮುಚ್ಚಿದ ಟರ್ಮಿನಲ್ ಅನ್ನು ಪುನಃ ತೆರೆಯುವ ಆಯ್ಕೆ ಮಾಡಿದೆ ಎಂದರೆ, ವಿಮಾನ ಪ್ರಯಾಣವು ಹಿಂತಿರುಗಿದೆ ಅಂದರೆ ಹೆಚ್ಚು ಜನ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರ್ಥ.
ಆದರೂ, ಸಾಂಕ್ರಾಮಿಕ ರೋಗದ ಅತಿದೊಡ್ಡ ನಷ್ಟಕ್ಕೀಡಾದ ವಲಯಗಳಲ್ಲಿ ಒಂದಾದ ದೇಶದ ಈಗಾಗಲೇ ಒತ್ತಡಕ್ಕೊಳಗಾದ ವಾಯುಯಾನ ವಲಯವು ಮತ್ತೆ ಮೊದಲಿನ ಹಳೆಗೆ ಮರಳುತ್ತದಾ ಎಂಬ ಪ್ರಶ್ನೆ ಕಾಡುತ್ತದೆ.