Free T-shirt for 50 Paise Coin: ಈಗಿನ ಕಾಲದಲ್ಲಿ 50 ಪೈಸೆ (Paise)ಗೆ ಏನು ಬರುತ್ತೆ ಅಂತ ಗೇಲಿ(Mocking) ಮಾಡುವವರೇ ಹೆಚ್ಚು. ಮೊದಲೆಲ್ಲ 50 ಪೈಸೆಗೆ ಬರುತ್ತಿದ್ದ 2 ಹುಣಸೆ ಕಡ್ಡಿ ಯಾರಿಗೆ ಗೊತ್ತಿಲ್ಲ ಹೇಳಿ. ಅದನ್ನು ನೆನಪಿಸಿಕೊಂಡರೆ ಸಾಕು ಈಗಲೂ ಬಾಯಿಯಲ್ಲಿ ನೀರುಬರುತ್ತೆ. ದಿನಗಳೆದಂತೆ 50 ಪೈಸೆ ನಾಣ್ಯದ ಚಲಾವಣೆ ನಿಂತೇ ಹೋಯಿತು. 50 ಪೈಸೆಗೆ ಯಾವುದೇ ಪದಾರ್ಥ(Ingredient) ಬರದಂತಾಯಿತು. ಆದರೆ ಈಗ ಮತ್ತೆ ತಮಿಳುನಾಡಿನ(Tamil Nadu)ಲ್ಲಿ 50 ಪೈಸೆ ನಾಣ್ಯಕ್ಕೆ ಫುಲ್ ಡಿಮ್ಯಾಂಡ್(Demand) ಬಂದಿದೆ. ಈಗ 50 ಪೈಸೆಗೆ ಯಾಕಷ್ಟು ಡಿಮ್ಯಾಂಡ್? ಅಂತ ನಿಮ್ಮ ತಲೆಯಲ್ಲಿ ಮೂಡಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ. 50 ಪೈಸೆ ನಾಣ್ಯ ಕೊಟ್ಟರೆ ಇಲ್ಲಿನ ಗಾರ್ಮೆಂಟ್ಸ್ವೊಂದರಲ್ಲಿ ಒಂದು ಟಿ-ಶರ್ಟ್(T-Shirt) ಫ್ರೀ. ಹೌದು, ಈ ರೀತಿಯ ಜಾಹೀರಾತು(Advertisement) ನೀಡಿ ಗಾರ್ಮೆಂಟ್ಸ್(Garments) ಮಾಲೀಕ ಪೇಚಿಗೆ ಸಿಲುಕಿದ್ದಾರೆ. 50 ಪೈಸೆ ನಾಣ್ಯ ತಂದರೆ, ಒಂದು ಟಿ – ಶರ್ಟ್ ಫ್ರೀ ಎಂದು ಜಾಹೀರಾತು ನೀಡಲಾಗಿತ್ತು. ಇದನ್ನು ನೋಡಿದ ಮಂದಿ, ಮನೆಯಲ್ಲ ಹುಡುಕಾಡಿ 50 ಪೈಸೆ ನಾಣ್ಯವನ್ನು ತಂದು ಇಲ್ಲಿ ಸೇರಿದ್ದರು. ಇಲ್ಲಿ ನೆರೆದಿದ್ದ ಜನರನ್ನು ಕಂಡು ಗಾರ್ಮೆಂಟ್ಸ್ ಮಾಲೀಕ ಕಕ್ಕಾಬಿಕ್ಕಿಯಾಗಿದ್ದರು.
ಟಿ-ಶರ್ಟ್ಗಾಗಿ ಮುಗಿಬಿದ್ದ ಸಾವಿರಾರು ಜನ
ತಮಿಳುನಾಡಿನ ತಿರುಚಿಯ ಮನಪ್ಪರೈನಲ್ಲಿ ಗಾರ್ಮೆಂಟ್ಸ್ವೊಂದು ಹೊಸದಾಗಿ ಆರಂಭವಾಗಿತ್ತು. ತಮ್ಮ ಮಳಿಗೆಯನ್ನ ಜನಪ್ರಿಯಗೊಳಿಸಲು ಜಾಹೀರಾತೊಂದನ್ನು ನೀಡಿದ್ದರು. 50 ಪೈಸೆ ನಾಣ್ಯವನ್ನು ತಂದರೆ, ಒಂದು ಟಿ ಶರ್ಟ್ ಉಚಿತವಾಗಿ ಕೊಡಲಾಗುತ್ತೆ ಅಂತ ಜಾಹೀರಾತು ನೀಡಿದ್ದರು. ಸಿಕ್ಕಿದ್ದೇ ಚಾನ್ಸ್ ಅಂತ ಮಂದಿ ಬೇರೆ ಊರುಗಳಿಂದ 50 ಪೈಸೆ ನಾಣ್ಯದ ಜೊತೆ ಬಂದಿದ್ದರು. ಸಾವಿರಾರು ಮಂದಿ ಬೆಳಿಗ್ಗೆಯಿಂದಲೇ ಮಳಿಗೆ ಮುಂದೆ ಠಿಕಾಣಿ ಹೂಡಿದ್ದರು. ಕೊರೋನಾ ಇದೆ ಎಂಬುದನ್ನೇ ಮರೆತ ಜನ ಮೈಗೆ ಮೈ ಅಂಟಿಸಿಕೊಂಡು ಕ್ಯೂನಲ್ಲಿ ನಿಂತಿದ್ದರು.
2 ಗಂಟೆ ಮುಂಚಿತವಾಗಿಯೇ ಆಫರ್ ಕ್ಲೋಸ್!
ಹಕೀಮ್ ಮೊಹಮ್ಮದ್ ಎಂಬುವವರು ಹೊಸ ಮಳಿಗೆಯನ್ನು ಆರಂಭಿಸಿದ್ದರು. ಮಳಿಗೆ ಉದ್ಘಾಟನೆ ದಿನ 50 ಪೈಸೆ ನಾಣ್ಯ ತಂದವರಿಗೆ ಟಿ ಶರ್ಟ್ ಉಚಿತ ಅಂತ ಬ್ಯಾನರ್ಗಳನ್ನು ಮನಪ್ಪರೈನಲ್ಲಿ ಹಾಕಿಸಿದ್ದರು. ಯಾರ ಮೊಬೈಲ್ ನೋಡಿದರು ಇದರ ಬಗ್ಗೆಯೇ ಸುದ್ದಿ. ರಸ್ತೆತುಂಬೆಲ್ಲ ಈ ಬಗ್ಗೆ ಪೋಸ್ಟರ್ ಹಾಕಿಸಿದ್ದರು. ನಮ್ಮ ಜನ ಕೇಳಬೇಕೆ, ಫ್ರೀ ಅಂದರೆ ನನಗೂ ಇರಲಿ, ನಮ್ಮ ಮನೆಯವರಿಗೂ ಇರಲಿ ಅಂತ ಸಾವಿರಾರು ಮಂದಿ ಅಂಗಡಿ ಮುಂದೆ ಜಮಾಯಿಸಿದ್ದರು. ಜಾಹೀರಾತಿನಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಈ ಆಫರ್ ಅಂತ ನೀಡಲಾಗಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಜನ ಇಲ್ಲಿ ಕಿಕ್ಕಿರಿದು ಸೇರಿದ್ದರು. ಇವರು ಬಂದಿದ್ದ ಗಾಡಿಗಳಿಂದ ಇಲ್ಲಿ ಟ್ರಾಫಿಕ್ ಸಮಸ್ಯೆಯೂ ಉಂಟಾಗಿತ್ತು. ಕ್ರೌಡ್ ಹೆಚ್ಚಾಗುತ್ತಿದ್ದಂತೆ ನಿಗದಿ ಪಡಿಸಿದ್ದ ಸಮಯಕ್ಕಿಂತ ಅಂದರೆ 11 ಗಂಟೆಗೆ ಮಳಿಗೆಯನ್ನ ಪೊಲೀಸರು ಮುಚ್ಚಿಸಿದ್ದಾರೆ.