bangalore accident news: ಮಾನವೀಯತೆ ಎಲ್ಲದ್ದಕ್ಕಿಂತ ಹೆಚ್ಚು. ಅಪಘಾತಗಳು(Accidents) ನಡೆದ ಸಮಯದಲ್ಲಿ ಸುತ್ತಮುತ್ತಲಿನ ಜನ ಸಹಾಯಕ್ಕೆ ಬರಬೇಕು, ಆ ರೀತಿ ಬಂದವರನ್ನು ಪೊಲೀಸ್ ಸ್ಟೇಷನ್-ಕೋರ್ಟ್ (police station-court) ಅಂತ ಅಲೆಸುವುದಿಲ್ಲ ಎಂದು ಕೋರ್ಟೇ ಹೇಳಿದೆ. ಆದರೆ ಜನರು ಮಾತ್ರ ಬದಲಾದಂತೆ ಕಾಣುತ್ತಿಲ್ಲ. ಇಂಥಹದ್ದೇ ಮನಕಲಕುವ ಘಟನೆ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಡೆದಿದೆ.
ರಸ್ತೆ ಮಧ್ಯೆ ಅಪಘಾತದಲ್ಲಿ ಹೆಂಡತಿ, ಪುಟ್ಟ ಮಗು ಸಾವನ್ನಪ್ಪಿದೆ. ಬದುಕುಳಿದಿದ್ದ ಗಂಡ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ಆದರೆ ಯಾರೊಬ್ಬರು ಇವರ ಬಳಿ ಬಂದಿಲ್ಲ. ಅಪಘಾತ ನಡೆದ ಸ್ಥಳದಲ್ಲೇ ರಸ್ತೆ ಮಧ್ಯೆ ಹೆಂಡತಿ-ಮಗುವಿನ ಶವದ ಮುಂದೆ ಗಂಡೆ ರೋದಿಸುತ್ತಿದ್ದ ದೃಶ್ಯ ನಿಜಕ್ಕೂ ಕರುಣಾಜನಕವಾಗಿತ್ತು.
ಬೆಂಗಳೂರಿನ ಕೆ.ಆರ್.ಪುರದ ನಿವಾಸಿಗಳಾದ ದಂಪತಿ, ತಮ್ಮ ಪುಟ್ಟ ಮಗುವಿನೊಂದಿಗೆ ಬೈಕ್ ನಲ್ಲಿ ಧರ್ಮಪುರಿಗೆ ಹೊರಟ್ಟಿದ್ದರು. ಮಾರತ್ ಹಳ್ಳಿಯ ರಿಂಗ್ ರೋಡ್ ಬಳಿ ಬಂದಾಗ ಟಿಪ್ಪರ್ ಲಾರಿ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದೆ.