ಚಾರ್ ಧಾಮ್ ತೀರ್ಥಯಾತ್ರೆ (Char Dham Yatra 2021) ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕು ಅನ್ನೋದು ಬಹುತೇಕರ ಕನಸು. ಇಂತಹ ತೀರ್ಥಯಾತ್ರೆಯನ್ನು ನಟಿ ಸಮಂತಾ (Samantha) ಯಶಸ್ವಿಯಾಗಿ ಮಾಡಿದ್ದಾರೆ. ಇಲ್ಲಿವೆ ನಟಿಯ ಯಾತ್ರೆಯ ಚಿತ್ರಗಳು. (ಚಿತ್ರಗಳು ಕೃಪೆ: ಸಮಂತಾ ಇನ್ಸ್ಟಾಗ್ರಾಂ ಖಾತೆ).

ನಟಿ ಸಮಂತಾ ಅವರು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಂತರ ಸ್ನೇಹಿತರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. ಇನ್ನೂ ನಾಗ ಚೈತನ್ಯ ಅವರ ಜೊತೆಗಿನ ವಿಚ್ಛೇದನ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದಾಗಿನಿಂದ ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ.
ಮನಸ್ಸಿನ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದಾರೆ ನಟಿ ಸಮಂತಾ. ದೇವಾಲಯಗಳನ್ನು ಸುತ್ತಾಡುತ್ತಾ ಅಲ್ಲಿ ಶಾಂತಿ ಹಾಗೂ ನೆಮ್ಮದಿಯ ಹುಡುಕಾಟದಲ್ಲಿ ಇರುವಂತೆ ಕಾಣುತ್ತಿದೆ.