ಬೆಂಗಳೂರು: ಕೌಟುಂಬಿಕ ಕಲಹ (Family Dispute) ಹಿನ್ನಲೆಯಲ್ಲಿ ಬೆಂಗಳೂರಿನ ದ್ವಾರಕಾನಗರದ ಕೃಷ್ಣ ಟೆಂಬಪ್ ಬಳಿ ಗೃಹಿಣಿ ಆತ್ಮಹತ್ಯೆಗೆ (House Wife Committed Suicide) ಶರಣಾಗಿದ್ದಾರೆ. ನಿತ್ಯಶ್ರೀ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮನೆಯ ಫ್ಯಾನಿಗೆ ನೇಣು ಬಿಗಿದು ನಿತ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದವರಾದ ನಿತ್ಯಶ್ರೀಗೆ ಎರಡು ವರ್ಷಗಳ ಹಿಂದೆ ರಾಜೇಶ್ ಎಂಬಾತನ ಜೊತೆ ಮದುವೆಯಾಗಿತ್ತು. ದಂಪತಿಗೆ ಒಂದು ವರ್ಷದ ಮಗು ಇದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಗಿರಿನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದ್ವಾರಕಾನಗರದ ಮನೆಯ ಬಳಿ ನಿತ್ಯಶ್ರೀ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಗೆ ಚಿತ್ರಹಿಂದೆ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮದುವೆ ಆದಾಗಿನಿಂದಲೂ ಕಿರುಕುಳ ಕೊಡ್ತಾ ಇದ್ರು. ಗಂಡ ಹಾಗೂ ಅತ್ತೆ ಪ್ರತಿನಿತ್ಯವೂ ಕಿರುಕುಳ ನೀಡ್ತಾ ಇದ್ರು. ಒಂದು ವರ್ಷದ ಮಗು ಇದ್ರೂ ಕಿರುಕುಳ ನೀಡ್ತಾ ಇದ್ರು ಎಂದು ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.