ವಿಜಯಪುರ: ಕಣ್ಣ ಮುಂದೆಯೇ ಯುವಕನನ್ನು ಕೊಲೆ ಮಾಡಲಾಯ್ತು ಎಂದು ಯುವತಿಯೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ (Alamela, Vijayapur) ಪೊಲೀಸ್ ಠಾಣೆಯಲ್ಲಿ ನಡೆದಿದೆ. 32 ವರ್ಷದ ರವಿ ನಂಬರಗಿ ಕೊಲೆ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೆ ರವಿ ನಂಬರಗಿ ಶವ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಯುವತಿಯೇ ತಮ್ಮ ಕುಟುಂಬದ ಎಂಟು ಜನರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಶುಕ್ರವಾರ ಸಂಜೆಯೇ ಘಟನೆ ನಡೆದಿದ್ದರೂ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ರವಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಯುವತಿ ಮತ್ತು ಆಕೆಯ ಕುಟುಂಬಸ್ಥರು ಗ್ರಾಮದಿಂದ ಪರಾರಿಯಾಗಿದ್ದಾರೆ
ಕೊಂದು ಶವ ಹೊತ್ತಯ್ದರಾ?
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ರವಿ ನಿಂಬರಗಿ ಸೋದರ, ಶುಕ್ರವಾರ ಮಧ್ಯಾಹ್ನವೇ ಅತ ಮನೆಯಿಂದ ಹೊರ ಹೋಗಿದ್ದನು. ಸಂಜೆ ಐದು ಗಂಟೆಗೆ ಆತನನ್ನ ಕೊಲ್ಲಲಾಗಿದೆ ಎಂಬ ಸುದ್ದಿ ಬಂತು. ಕೊಲೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಆತನ ಚೀಲ ಮತ್ತು ಚಪ್ಪಲಿ ಸಿಕ್ಕಿದೆ. ಯುವತಿಯ ಕುಟುಂಬದವರಾದ ಅಲ್ತಾಫ್ ಮತ್ತಿ ಇಸ್ಮೈಲ್ ಸೇರಿದಂತೆ ಎಂಟು ಜನರು ಕೊಲೆ ಮಾಡಿದ್ದಾರೆ. ಸಂಜೆ ಸುಮಾರು ಏಳು ಗಂಟೆಗೆ ಮನೆ ಹತ್ತಿರ ಬಂದಿದ್ದ ಯುವತಿಯೇ ನಮಗೆ ಕೊಲೆಯಾಗಿದೆ ಎಂದು ಹೇಳಿದ್ದಳು. ಈ ಸಂಬಂದ ಪೊಲೀಸ್ ಠಾಣೆಗೂ ವಿಷಯ ತಿಳಿಸಿದ್ದೇವೆ ಎಂದರು. ರವಿಯನ್ನು ಕೊಲೆಗೈದಿರುವ ಯುವತಿ ಕುಟುಂಬಸ್ಥರು ಶವದಿಂದ ಪರಾರಿಯಾಗಿದ್ದಾರೆ ಎಂದು ರವಿ ನಂಬರಗಿ ಸೋದರ ಆರೋಪಿಸಿದ್ದಾನೆ.
ಎರಡು ವರ್ಷದಿಂದ ಲವ್, ಮದುವೆಗೆ ವಿರೋಧ
ಇತ್ತ ಕೊಲೆ ನಡೆದಿದೆ ಎನ್ನಲಾದ ಸ್ಥಳದಲ್ಲಿಯೇ ಕುಳಿತಿರುವ ರವಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗ ಒಳ್ಳೆಯವನು. ಆತನನ್ನ ಕೊಂದವರಿಗೆ ದೇವರು ಒಳ್ಳೆಯದು ಮಾಡಲ್ಲ. ಅವರ ವಂಶ ನಿರ್ವಂಶ ಅಗುತ್ತೆ ಎಂದು ಶಾಪ ಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ರವಿ ನಂಬರಗಿ ಮತ್ತು ಯುವತಿ ಪ್ರೇಮದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಅನ್ಯಕೋಮು ಆಗಿದ್ದರಿಂದ ಎರಡೂ ಕುಟುಂಬದವರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಯುವತಿಯಿಂದ ದೂರ ಇರುವಂತೆ ರವಿಗೆ ಈ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು.