ರಾಜ್ಯಸುದ್ದಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಪ್ಪಿ ತಪ್ಪಿ ಈ ವಸ್ತುಗಳನ್ನು ತಿನ್ನಬೇಡಿ..!

ನಮಗೆ ಅನಿಸಿದ್ದನ್ನು ತಿನ್ನುವುದು ಯಾವಾಗಲೂ ಸರಿಯಲ್ಲ. ನಾವು ಬೆಳಿಗ್ಗೆ(Morning Food) ತಿನ್ನುವ ಮೊದಲ ಆಹಾರ ನಮ್ಮ ದಿನವನ್ನು ನಿರ್ಧಾರ ಮಾಡುತ್ತದೆ.ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ(Empty Stomach) ಸೇವಿಸಿದರೆ ನಿಮ್ಮ ಕರುಳಿನಲ್ಲಿ ಹಾನಿ ಉಂಟಾಗಬಹುದು. ದೀರ್ಘಾವಧಿಯ ನಿದ್ರೆಯ ನಂತರ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕಾರ್ಯನಿರ್ವಹಿಸಲು ಸ್ವಲ್ಪ ಸಮಯವನ್ನು ನೀಡಬೇಕು ಮತ್ತು ನೀವು ಎದ್ದ ಕನಿಷ್ಠ ಎರಡು ಗಂಟೆಗಳ ನಂತರ ಉಪಹಾರ ಸೇವಿಸಬೇಕು ಎಂದು ಅವರು ತಜ್ಞರು ಸಲಹೆ ನೀಡುತ್ತಾರೆ. 

ಹಾಗಾದ್ರೆ ಖಾಲಿ ಹೊಟ್ಟೆಯಲ್ಲಿ ಯಾವ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದು ಇಲ್ಲಿದೆ 

ಮಸಾಲೆಯುಕ್ತ ಆಹಾರಗಳು

ಖಾಲಿ ಹೊಟ್ಟೆಯಲ್ಲಿ ಮಸಾಲೆಗಳು ಮತ್ತು ಮೆಣಸಿನಕಾಯಿಗಳನ್ನು ತಿನ್ನುವುದರಿಂದ ಹೊಟ್ಟೆಯ ಒಳಪದರದಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು, ಇದು ಆಮ್ಲೀಯ ಪ್ರತಿಕ್ರಿಯೆಗಳು ಮತ್ತು ಸೆಳೆತಕ್ಕೆ ಕಾರಣವಾಗಬಹುದು. ಹಾಗಾಗಿ ಇದು ಅರ್ಜೀಣಕ್ಕೂ ಕಾರಣವಾಗಬಹುದು.

ಸಕ್ಕರೆಯ ಆಹಾರಗಳು ಅಥವಾ ಪಾನೀಯಗಳು

ನಿಮ್ಮ ದಿನವನ್ನು ಪ್ರಾರಂಭಿಸಲು ಒಂದು ಲೋಟ ಹಣ್ಣಿನ ಜ್ಯೂಸ್​ ಅನ್ನು ಸೇವಿಸುವುದು ಆರೋಗ್ಯಕರ ಎಂದು ನಮ್ಮಲ್ಲಿ ಹೆಚ್ಚಿನವರು ಅಭಿಪ್ರಾಯ ಹೊಂದಿದ್ದಾರೆ. ಅದು ಹಾನಿಕಾರಕವಾಗಬಹುದು. ಆದರೆ ಆ ಜ್ಯೂಸ್​ಗಳು ದೀರ್ಘಾವಧಿಯ ವಿಶ್ರಾಂತಿಯ ನಂತರವೂ ಎಚ್ಚರಗೊಳ್ಳುತ್ತಿರುವ ಮೇದೋಜ್ಜೀರಕ ಗ್ರಂಥಿಯ ಮೇಲೆ ಹೆಚ್ಚುವರಿ ಹೊರೆ ಬೀಳಬಹುದು. ಹೊಟ್ಟೆಯು ಖಾಲಿಯಾಗಿರುವುದರಿಂದ, ಹಣ್ಣುಗಳಲ್ಲಿನ ಫ್ರಕ್ಟೋಸ್ ರೂಪದಲ್ಲಿ ಸಕ್ಕರೆ ನಿಮ್ಮ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವನೆ ಮಾಡಬೇಡಿ.

Related Articles

Leave a Reply

Your email address will not be published. Required fields are marked *

Back to top button