ದೇಶಾದ್ಯಂತ 100 ಕೋಟಿ ಡೋಸ್ ಕೋವಿಡ್ ಲಸಿಕೆ (india Covid Vaccine Milestone) ನೀಡುವಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಿದ್ದು, ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ದೇಶದ ಜನರಿಗೆ ಶುಭ ಕೋರಿದರು.
ಈ ಸಂಬಂಧ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 100 ಕೋಟಿ ಲಸಿಕೆ ನೀಡುವ ಮೂಲಕ ಭಾರತದ ಸಾಮರ್ಥ್ಯ ಪ್ರತಿಬಿಂಬಿಸಲಾಗಿದೆ. ಲಸಿಕೆ ನೀಡಿಕೆಯಲ್ಲಿ ಜಗತ್ತಿನಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು
ಇನ್ನು ಇದೇ ವೇಳೆ ಜನರಿಗೆ ಎಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಲಸಿಕೆ ಪಡೆದ ಮಾತ್ರಕ್ಕೆ ಜನರು ಕೋವಿಡ್ ನಿಯಮಾವಳಿ (covid Norms) ಮರೆಯಬಾರದು. ಜನರು ಮತ್ತೊಂದು ಅಲೆಗೆ ಆಹ್ವಾನ ನೀಡದೇ, ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮನವಿ ಮಾಡಿದರು.