ದೇಶಸುದ್ದಿ

ಲೈವ್​ನಲ್ಲಿದ್ದ ರಿಪೋರ್ಟರ್ ಮೊಬೈಲ್​​ ಕದ್ದ ಕಳ್ಳ: ಖತರ್ನಾಕ್​ ಖದೀಮನನ್ನು ಸೆರೆ ಹಿಡಿದ ವೀಕ್ಷಕರು..!

ಸಾಮಾಜಿಕ ಜಾಲತಾಣ(Social Media)ದಲ್ಲಿ ಅದೆಂತಹ ಸುದ್ದಿ(News)ಗಳಿರಲೀ ಕ್ಷಣ ಮಾತ್ರದಲ್ಲಿ ಎಲ್ಲರ ಕೈ ಸೇರುತ್ತೆ. ಎಲ್ಲೋ ಕೂತು ನಡೆಯುತ್ತಿರುವ ಘಟನೆಗಳನ್ನ ಲೈವ್(Live)​ ಮಾಡಿ ಮತ್ತೊಂದಿಷ್ಟು ಜನರಿಗೆ ತೋರಿಸುತ್ತಾರೆ. ವಿಶ್ವ(World)ದ ಒಂದು ಮೂಲೆಯಿಂದ ಮತ್ತೊಂದು ಮೂಲೆಯವರಗೂ ಪ್ರಸ್ತುತ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹದು. ಅಷ್ಟರ ಮಟ್ಟಿಗೆ ಎಲ್ಲರೂ ಸೋಷಿಯಲ್​ ಮೀಡಿಯಾದಲ್ಲಿ ಆಕ್ಟೀವ್(Active)​ ಆಗಿರುತ್ತಾರೆ.

ಕೆಲವೊಂದು ಬಾರಿ ಲೈವ್​ನಲ್ಲಿದ್ದಾಗ ಕೆಲ ಎಡವಟ್ಟುಗಳು ಆಗಿರುವುದನ್ನು ನಾವು ನೋಡಿದ್ದೇವೆ. ಲೈವ್​​ ನೀಡುತ್ತಾ ಬೆಟ್ಟದಿಂದ ಬಿದ್ದು ಸತ್ತಿದ್ದಾರೆ. ಮತ್ತೆ ಕೆಲವರು ಲೈವ್​​ ನೀಡುತ್ತಾ ಬೈಕ್​(Bike) ಓಡಿಸಿಕೊಂಡು ಬಿದ್ದು ಮೃತಪಟ್ಟಿದ್ದಾರೆ. ಆದರೆ ಈಜಿಪ್ಟ್​(Egypt)ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪತ್ರಕರ್ತ(Journalist)ನೊಬ್ಬ ಲೈವ್​ನಲ್ಲಿ ಸುದ್ದಿ ನೀಡುತ್ತಿದ್ದಾಗ, ಇದರ ಅರಿವಿರದೇ ಬಂದ ಕಳ್ಳ(Thief) ಆ ಮೊಬೈಲ್​ ಅನ್ನು ಕದ್ದು ಪರಾರಿಯಾಗಿದ್ದಾನೆ.

ಲೈವ್​​ನಲ್ಲಿ ಎಲ್ಲರಿಗೂ ಮುಖ ತೋರಿಸಿದ ಕಳ್ಳ

ಪತ್ರಕರ್ತನಿಂದ ಮೊಬೈಲ್​ ಕದ್ದು ಬೈಕ್​ನಲ್ಲಿ ಕಳ್ಳ ಸ್ವಲ್ಪ ದೂರ ಬಂದಿದ್ದಾನೆ. ನಂತರ ಮೊಬೈಲ್​ ಅನ್ನು ನೋಡಿದ್ದಾನೆ. ಇತ್ತ ಪತ್ರಕರ್ತ ನೀಡುತ್ತಿದ್ದ ವರದಿಯನ್ನು ನೋಡುತ್ತಿದ್ದ ಸಾವಿರಾರು ಮಂದಿಗೆ ಕಳ್ಳನ ಮುಖ ದರ್ಶನವಾಗಿದೆ. ಬಾಯಲ್ಲಿ ಸಿಗರೇಟ್​ ಸೇದುತ್ತಾ ಮೊಬೈಲ್​ ಕಳ್ಳ ತನ್ನ ದರ್ಶನ ನೀಡಿದ್ದಾನೆ. ಪತ್ರಕರ್ತ ಲೈವ್​ನಲ್ಲಿ ಸುದ್ದಿ ನೀಡುತ್ತಿದ್ದರ ಬಗ್ಗೆ ಈತನಿಗೆ ಯಾವುದೇ ಅರಿವಾಗಿಲ್ಲ. ಇದಾದ ಕೆಲ ನಿಮಿಷಗಳ ಬಳಿಕ ಆತನಿಗೆ ಈ ವಿಚಾರ ತಿಳಿದಿದೆ ಕೂಡಲೇ ಲೈವ್​ ಆಫ್​ ಮಾಡಿ  ಪರಾರಿಯಾಗಿದ್ದ.

Related Articles

Leave a Reply

Your email address will not be published. Required fields are marked *

Back to top button