ಬಾಲಿವುಡ್ಗೂ (Bollywood) ವಿವಾದಕ್ಕೂ ಬಿಡಿಸಲಾಗದ ನಂಟಿದೆ ಎಂದರೆ ತಪ್ಪಾಗದು. ಇಲ್ಲಿ ಸಿನಿಮಾಗಳಲ್ಲಿ ನಾಯಕ ನಟರಾಗಿ ಮಿಂಚಿದ ಕೆಲವರು ದೊಡ್ಡ ದೊಡ್ಡ ವಿವಾದಗಳಲ್ಲಿ (Controversial Cases)ಸಿಲುಕಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ಸ್ಟಾರ್ ನಟರ ಪ್ರಕರಣಗಳು ನ್ಯಾಯಾಲದಲ್ಲಿವೆ. ಇಂತಹ ಪ್ರಕರಣದಲ್ಲಿ ಸಿಲುಕಿದ ಸ್ಟಾರ್ಗಳು ಹೈ-ಪ್ರೊಫೈಲ್ ವಕೀಲರನ್ನು (High Profile Lawyers ) ತಮ್ಮ ಪರ ವಾದ ಮಾಡಲು ನಿಯೋಜಿಸಿಕೊಂಡಿದ್ದಾರೆ. ಇಂತಹ ಐದು ಮಂದಿ ಹೈ ಪ್ರೊಫೈಲ್ ವಕೀಲರು ಹಾಗೂ ಅವರು ತೆಗೆದುಕೊಂಡ ವಿವಾದಿತ ಪ್ರಕರಣಗಳ ಕುರಿತಾದ ಮಾಹಿತಿ ಇಲ್ಲಿದೆ.
ಸದ್ಯ ಬಾಲಿವುಡ್ನಲ್ಲಿ ಮತ್ತೆ ಮಾದಕ ವಸ್ತು ಪ್ರಕರಣದ ಸುದ್ದಿ ಸದ್ದು ಮಾಡುತ್ತಿದೆ. ಸ್ಟಾರ್ ನಟರ ಮಕ್ಕಳ ವಿಚಾರಣೆ ಸಹ ನಡೆಸಲಾಗುತ್ತಿದೆ. ಅಲ್ಲದೆ ಸ್ಟಾರ್ ಕಿಡ್ ಮಾದಕ ವಸ್ತು ಪ್ರಕರಣದಿಂದಾಗಿ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲೂ ಸಹ ಖ್ಯಾತ ವಕೀಲರು ವಾದ ಮಾಡುತ್ತಿದ್ದಾರೆ.

ಹಿರಿಯ ವಕೀಲ ಸತೀಶ್ ಮಾನೆಶಿಂಧೆ: ಹಿರಿಯ ವಕೀಲ ಸತೀಶ್ ಮಾನೆಶಿಂಧೆ ಅವರಿಗೆ ಸೆಲೆಬ್ರಿಟಿಗಳ ಕೇಸ್ ಹೊಸದೇನಲ್ಲ. ಸದ್ಯ ಸ್ಟಾರ್ ಕಿಡ್ ಪರವಾಗಿ ನ್ಯಾಯಾಲಯದಲ್ಲಿ ಅವರು ವಾದ ಮಂಡಿಸುತ್ತಿದ್ದಾರೆ. ಈ ಹಿಂದೆ ಇವರು 1993ರ ಮುಂಬೈ ಬಾಂಬ್ ಬ್ಲಾಸ್ ಪ್ರಕರಣದಲ್ಲಿ ಸಂಜಯ್ ದತ್ ಸಿಲುಕಿಕೊಂಡಿದ್ದಾಗ, ಇವೇ ನಟನ ಪರವಾಗಿ ವಾದ ಮಾಡಿದ್ದರು. ಸಂಜಯ್ ವಿರುದ್ಧ ಗಂಭೀರವಾದ ಆರೋಪ ಇದ್ದರೂ ಅವರಿಗೆ ಜಾಮೀನು ಸಿಗುವಂತೆ ಮಾಡಿದ್ದರು. ಇನ್ನು ಸಲ್ಮಾನ್ ಖಾನ್, ರಿಯಾ ಚಕ್ರವರ್ತಿ ಪರ ಸಹ ಇವರೇ ವಾದಿಸಿದ್ದರು. ವರದಿಗಳ ಪ್ರಕಾರ ಇವರು ಪ್ರತಿ ವಿಚಾರಣೆಗೆ 10 ಲಕ್ಷ ಪಡೆಯುತ್ತಾರಂತೆ.