ಮಹಾಮಾರಿ, ಹೆಮ್ಮಾರಿ, ಕ್ರೂರಿ, ರಕ್ಕಸ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಿದ್ದ ಕೊರೋನಾ ವೈರಸ್ (Corona Virus)ಸಾಂಕ್ರಾಮಿಕ ಪಿಡುಗಿನ ವಿರುದ್ಧ ಭಾರತ(India) ಎದೆಗುಂದದೆ, ದಿಟ್ಟತನದಿಂದ ಹೋರಾಟ ನಡೆಸಿದೆ. ಕೋವಿಡ್-19 ಲಸಿಕೆ(Vaccine) ವಿತರಣೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಇಂದು ದೇಶದಲ್ಲಿ ಕರೊನಾ ವೈರಸ್ ಲಸಿಕೆ ವಿತರಣೆ ಪ್ರಮಾಣ 100 ಕೋಟಿ ಗಡಿಯನ್ನ ದಾಟಿದೆ.
ಕಳೆದ ಜನವರಿ 16ರಂದು ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi)ಯವರು ಕೋವಿಡ್-19 ಲಸಿಕೆ ವಿತರಣೆ(Vaccination drive) ಅಭಿಯಾನಕ್ಕೆ ಚಾಲನೆ ನೀಡಿದ್ದರು. 9 ತಿಂಗಳ ಬಳಿಕ ಲಸಿಕೆ ವಿತರಣೆ ಪ್ರಮಾಣ ಇಂದು 100 ಕೋಟಿ ಗಡಿಯನ್ನ ದಾಟಿದೆ. ಸೆಪ್ಟೆಂಬರ್(September) ತಿಂಗಳಿನಲ್ಲಿ ಅತಿ ಹೆಚ್ಚು ಡೋಸ್ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ. ಇತ್ತೀಚೆಗೆ ಮೋದಿ ಜನ್ಮದಿನ ಹಿನ್ನೆಲೆ ಒಂದೇ ದಿನ ಬರೋಬ್ಬರಿ 2.25 ಕೋಟಿ ಡೋಸ್ ಲಸಿಕೆ ಹಾಕಿ ಹೊಸ ದಾಖಲೆ ನಿರ್ಮಿಸಿತ್ತು.
ಭಾರತದಲ್ಲಿ 100 ಕೋಟಿ ಲಸಿಕೆ ವಿತರಣೆ
ಕೋವಿನ್ ಪೋರ್ಟಲ್ನಲ್ಲಿ ಬುಧವಾರ ರಾತ್ರಿಯ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 99.7 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿತ್ತು. ಇಂದು ಬೆಳಗ್ಗೆ 10ರ ವೇಳೆಗೆ 100 ಕೋಟಿ ಡೋಸ್ ವ್ಯಾಕ್ಸಿನ್ ವಿತರಣೆ ಸಂಪೂರ್ಣವಾಗಿದ್ದು, ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದೇಶದ ಅರ್ಹ ಫಲಾನುಭವಿಗಳ ಪೈಕಿ ಶೇ. 75ರಷ್ಟು ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಶೇ.31ರಷ್ಟು ಜನರು ಎರಡೂ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.