ರಾಜ್ಯಸುದ್ದಿ

ಮನೆಗೆಲಸದವನಿಂದಲೇ ಮಗು ಕಿಡ್ನಾಪ್​: 1 ಕೋಟಿ ಹಣಕ್ಕೆ ಡಿಮ್ಯಾಂಡ್​, ಮೂರೇ ಗಂಟೆಯಲ್ಲೇ ಲಾಕ್..​!

ದೂರವಿರುವ ದುಷ್ಮನ್​(Enemy)​​ನ ಬೇಕಾದರೇ ನಂಬಬಹುದು. ಹತ್ತಿರವಿದ್ದುಕೊಂಡೇ ನಗುಮುಖ ತೋರಿಸಿ ಮೋಸ ಮಾಡುವವರನ್ನ ನಂಬಬಾರದು ಎಂದು ಎಲ್ಲ ಹೇಳುತ್ತಾರೆ. ನಾವು ನಂಬಿದವರೇ ನಮಗೆ ನಂಬಿಕೆ ದ್ರೋಹ(Cheating) ಬಗೆಯುತ್ತಾರೆ. ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿ(Delhi)ಯಲ್ಲಿ ಇಂತಹದ್ದೆ ಒಂದು ಘಟನೆ ಜರುಗಿದೆ. ಮಗುವನ್ನು ನೋಡಿಕೊಳ್ಳಲು ಕೆಲಸಕ್ಕೆ ಸೇರಿಸಿಕೊಂಡಿದ್ದವನೇ, ಆ ಮಗುವನ್ನ ಕಿಡ್ನಾಪ್​(Kidnap) ಮಾಡಿ ಹಣಕ್ಕೆ ಡಿಮ್ಯಾಂಡ್(Demand)​ ಇಟ್ಟಿದ್ದ. ಅದು ಬರೋಬ್ಬರಿ ಒಂದು ಕೋಟಿ ಹತ್ತು ಲಕ್ಷಕ್ಕೆ ಆತ ಡಿಮ್ಯಾಂಡ್​ ಮಾಡಿದ್ದ.

ತಾವೇ ಆತನ ಒಳ್ಳೆಯ ಗುಣಗಳನ್ನು ನೋಡಿ ಮಗುವನ್ನು ನೋಡಿಕೊಳ್ಳಲು ಕೆಲಸ ಕೊಟ್ಟವರು, ಇದೀಗ ಆತನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯಲು ಹೋದ ಆತ ಪೊಲೀಸರ ಅತಿಥಿಯಾಗಿದ್ದಾನೆ. ಹಣದ ಆಸೆಗೆ ಬಿದ್ದು, ದುಡುಕಿ ತಪ್ಪು ಮಾಡಿ ಈಗ ಜೈಲು ಸೇರಿದ್ದಾನೆ. ತನ್ನ ಭವಿಷ್ಯವನ್ನ ತನ್ನ ಕೈಯಾರೆ ಹಾಳು ಮಾಡಿಕೊಂಡಿದ್ದಾನೆ.

ಮನೆಗೆಲಸದವನಿಂದಲೇ ಮಗು ಕಿಡ್ನಾಪ್​

ದೆಹಲಿಯ ಗಾಂಧಿನಗರದ ಸುಭಾಷ್​ ಮೊಹೊಲ್ಲಾ ಏರಿಯಾದಲ್ಲಿ ವಾಸಿಸುತ್ತಿರುವ ಕುಟುಂಬವೊಂದು ತಮ್ಮ ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಪರಿಚಯಸ್ಥ ವ್ಯಕ್ತಿಗೆ ಕೊಟ್ಟಿದ್ದರು. ಒಂದು ತಿಂಗಳ ಹಿಂದೆ ಮೋನು ಎಂಬಾತನಿಗೆ ಮಗು ನೋಡಿಕೊಳ್ಳುವ ಕೆಲಸವನ್ನು ನೀಡಿದ್ದರು. ಆದರೆ ಮೋನು ಕೇವಲ 9ದಿನಗಳ ಕಾಲ ಕೆಲಸವನ್ನು ಮಾಡಿವ ಕಡಿಮೆ ಸಂಬಳ ಎಂದು ಬಿಟ್ಟು ಹೋಗಿದ್ದ. ಬಳಿಕ ಆರು ದಿನಗಳ ಹಿಂದೆ ಮಗುವಿನ ಕುಟುಂಬಸ್ಥರು ಮತ್ತೆ ಮೋನುಗೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button