ಬೆಂಗಳೂರು: ವಿವಾಹವನ್ನು ರದ್ದುಗೊಳಿಸುವ ಅಥವಾ ವಿಚ್ಚೇದನ (Muslim marriage) ನೀಡುವ ಮೂಲಕ ಮಹಿಳೆಯ ಹಕ್ಕುಗಳನ್ನು ಕಿತ್ತುಕೊಳ್ಳಲು ಆಗಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka Highcourt) ಹೇಳಿ ಮಾಜಿ ಪತ್ನಿಗೆ ಜೀವನಾಂಶ ನೀಡಲು ಆಗಲ್ಲ ಎಂದು ಸಲ್ಲಿಸಿದ್ದ ವ್ಯಕ್ತಿಯ ಅರ್ಜಿಯನ್ನು (Reject Plea) ವಜಾಗೊಳಿಸಿದೆ. ಜೀವನಾಂಶ ನೀಡುವ ಕುರಿತು ವ್ಯಕ್ತಿಯ ಪ್ರಕರಣ ದಶಕಗಳಿಂದಲೂ ನ್ಯಾಯಾಲಯದಲ್ಲಿತ್ತು. ಇದೀಗ ನ್ಯಾಯಾಲಯ ವ್ಯಕ್ತಿಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ತಲಾಖ್ (Talaq) ನೀಡಿದ ನಂತರ ಹೊಸ ಪತ್ನಿ (Wife) ಮತ್ತು ಮಕ್ಕಳು (Children) ತನ್ನ ಮೇಲೆ ಅವಲಂಬಿತರಾಗಿರೋದರಿಂದ ಮೊದಲ ಪತ್ನಿಗೆ ಜೀವಾನಂಶ ನೀಡಲು ಸಾಧ್ಯವಿಲ್ಲ ಎಂದು ಹೇಳುವಂತಿಲ್ಲ ಎಂದು ನ್ಯಾಯಾಧೀಶ ಕಷ್ಣ ದೀಕ್ಷಿತ್ (Justice Krishna S Dixit) ಹೇಳಿದ್ದಾರೆ.
ಮೂರು ಪ್ರಕಾರಗಳಲ್ಲಿ ವಿಚ್ಛೇದಿತ ಮಹಿಳೆಗೆ ಜೀವನಾಂಶ ನೀಡಬೇಕು
ಎಜಾಜುರ್ ರೆಹಮಾನ್ (Ezazur Rehman)ಎಂಬಾತ ಮಾಜಿ ಪತ್ನಿ(Ex Wife)ಗೆ ಜೀವನಾಂಶ ನೀಡಲು ಆಗಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದನು. ತಾನು ಮತ್ತೊಂದು ಮದುವೆಯಾಗಿದ್ದು, ತನಗೆ ಪತ್ನಿ ಮತ್ತು ಮಕ್ಕಳು ಇದ್ದಾರೆ. ಹಾಗಾಗಿ ಅವರ ಜವಾಬ್ದಾರಿ ನನ್ನ ಮೇಲಿರುವ ಕಾರಣ ಮೊದಲ ಪತ್ನಿ ಸೈರಾ ಬಾನು(Saira Banu)ಗೆ ಜೀವನಾಂಶ ನೀಡಲು ಆಗಲ್ಲ ಎಂದು ಅರ್ಜಿ ಸಲ್ಲಿಸಿದ್ದನು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಎರಡನೇ ಮದುವೆಯಾದ್ರೂ ಮೊದಲ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಹೇಳಿದೆ. ಖುರಾನ್ ಮತ್ತು ಹದೀಸ್ ಪ್ರಕಾರ ಮೂರು ಪ್ರಕಾರಗಳಲ್ಲಿ ವಿಚ್ಛೇದಿತ ಮಹಿಳೆಗೆ ಜೀವನಾಂಶ ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಲ್ಪ ಮೆಹರ್ (Mehr) (ಮದುವೆ ವೇಳೆ ವಧುವಿಗೆ ವರ ನೀಡುವ ಮೊತ್ತ) ನೀಡಿದ್ದರೆ ಅಥವಾ ಮಹಿಳೆ ಜೀವನ ನಡೆಸಲು ಅಶಕ್ತಳಾಗಿದ್ರೆ ಮತ್ತು ಆಕೆ ಮತ್ತೆ ಯಾರನ್ನೂ ಮದುವೆ ಆಗದಿದ್ದರೆ ಜೀವನಾಂಶ ನೀಡುವ ಕುರಿತು ಖುರಾನ್ ಮತ್ತು ಹದೀಸ್ ನಲ್ಲಿ ಹೇಳಲಾಗಿದೆ. ವಿಚ್ಛೇದನ ನೀಡಿದ ಬಳಿಕ ಪತಿಯ ಎಲ್ಲ ಕರ್ತವ್ಯ ಮತ್ತು ಜವಾಬ್ದಾರಿಗಳು ಮುಗಿಯೋದಿಲ್ಲ ಎಂದು ನ್ಯಾಯಾಲಯ ಹೇಳಿದೆ.