ದೇಶಸುದ್ದಿ

ಮುಂಬೈನಲ್ಲಿ ಶೂನ್ಯಕ್ಕಿಳಿದ ಕೊರೋನಾ ಸಾವಿನ ಸಂಖ್ಯೆ: ಈ ಯುದ್ಧದಲ್ಲಿ ಮಹಾನಗರ ಗೆದ್ದದ್ದು ಹೇಗೆ?

ಮುಂಬೈ (ಅಕ್ಟೋಬರ್​ 19); ಕಳೆದ ವರ್ಷ ಭಾರತಕ್ಕೆ ಮಾರಕ ಕೊರೋನಾ (CoronaVirus) ಸಾಂಕ್ರಾಮಿಕ ವ್ಯಾಪಿಸಿದ ಸಂದರ್ಭದಲ್ಲಿ ಮುಂಬೈನಲ್ಲಿ ಈ ಸೋಂಕಿಗೆ ಮೊದಲ ಬಲಿಯಾಗಿದ್ದು,  ಮಾರ್ಚ್ 17, 2020 ರಂದು. ಈ ದಿನ ಮುಂಬೈ (Mumbai) ತನ್ನ ಮೊದಲ ಕೋವಿಡ್ -19 ಸಾವನ್ನು ವರದಿ ಮಾಡಿತ್ತು.

ಇಡೀ ದೇಶದಲ್ಲಿ ಅತೀ ಹೆಚ್ಚು ಸೋಂಕು ಪೀಡಿತ ರಾಜ್ಯ ಎಂಬ ಕುಖ್ಯಾತಿಗೂ ಮುಂಬೈ ಒಳಗಾಗಿತ್ತು. ಪರಿಣಾಮ ಮಹಾರಾಷ್ಟ್ರ (Maharashtra) ಸರ್ಕಾರ ಸೋಂಕಿನ ವಿರುದ್ಧ ದೊಡ್ಡ ಹೋರಾಟವನ್ನೇ ಕೈಗೊಂಡಿತ್ತು. ಪರಿಣಾಮ ಕಳೆದ ಮಾರ್ಚ್ 17 ರ ನಂತರ ಮೊದಲ ಅಕ್ಟೋಬರ್​ 17 ರಂದು ಮೊದಲ ಕೊರೋನಾ ವೈರಸ್ ಸಂಬಂಧಿತ ಸಾವು ದಾಖಲಾಗಿದೆ. ಕಳೆದ 6 ತಿಂಗಳಿನಿಂದ ಮುಂಬೈನಲ್ಲಿ ಒಂದೇ ಒಂದು ಸಾವು ದಾಖಲಾಗದೆ ಇರುವುದು ವಿಶೇಷ.

ಕೊರೋನಾ ಅಲೆ ಆರಂಭವಾದ ಕಳೆದ ಒಂದೂವರೆ ವರ್ಷದಲ್ಲಿ ಮುಂಬೈ 16,180 ಸಾವುಗಳನ್ನು ವರದಿ ಮಾಡಿದೆ. ಕಳೆದ 19 ತಿಂಗಳಲ್ಲಿ ಭಾರತದ ಒಟ್ಟು ಕೋವಿಡ್ -19 ಸಾವುಗಳಲ್ಲಿ ಶೇ.4ರಷ್ಟು ಸಾವುಗಳು ಕೇವಲ ಮುಂಬೈನಲ್ಲಿ ಮಾತ್ರ ದಾಖಲಾಗಿದ್ದವು. ಆದರೆ, ಇದೀಗ ಮುಂಬೈ ನಗರವು ಶೂನ್ಯ ಸಾವಿನ ಮೈಲಿಗಲ್ಲನ್ನು ಸಾಧಿಸಿದ್ದು, ಅದನ್ನು ಹೇಗೆ ಸಾಧಿಸಿದೆ ಎಂಬ ವಿವರ ಇಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button