ಇತ್ತೀಚಿನ ಸುದ್ದಿ
ಲಿಂಗಸುಗೂರು | ಲಾರಿಗಳ ಮುಖಾಮುಖಿ ಡಿಕ್ಕಿ ಇಬ್ಬರಿಗೆ ಗಾಯ

ರಾಯಚೂರು : ಜಿಲ್ಲೆಯ ಲಿಂಗಸುಗೂರು-ಮುದಗಲ್ ರಸ್ತೆಯಲ್ಲಿ ಕಸಬಾ ಲಿಂಗಸ್ಗೂರು ಗ್ರಾಮದ ಸಮೀಪ ಬುಧವಾರ ಎರಡು ಲಾರಿಗಳ ಮಧ್ಯೆ ಸಂಭವಿಸಿದ ರಸ್ತೆ ಅಫಘಾತದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಾರಿ ಚಾಲಕ ಮುದಗಲ್ ನ ಸೈಯದ್ ಹುಸೇನ್, ಕ್ಲೀನರ್ ಸೈಫ್ ಅವರನ್ನು ಚಿಕಿತ್ಸೆಗಾಗಿ ಲಿಂಗಸುಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೊಡ್ಡ ಕಂಟೇನರ್ ಅಡ್ಡ ಬಂದ ಕಾರಣ ಭತ್ತ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ರು ತಿಳಿಸಿದ್ದಾರೆ.
ಅಫಘಾತದಿಂದಾಗಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
ಸ್ಥಳಕ್ಕೆ ಲಿಂಗಸುಗೂರು ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ಮುಸ್ತಾಫಾ tv8kannada ಲಿಂಗಸುಗೂರು