ಲಂಡನ್: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕೊರೊನಾ ವೈರಸ್ನ ಹೊಸ ರೂಪಾಂತರವನ್ನು ಕಂಡು ಹಿಡಿದಿದ್ದಾರೆ. ಅದಕ್ಕೆ ಒಮಿಕ್ರೋನ್ ಎಂಬ ಹೆಸರನ್ನು ಇಡಲಾಗಿದೆ. ದಕ್ಷಿಣ ಆಫ್ರಿಕಾದ ಹೆಚ್ಚು ಜನಸಂಖ್ಯೆ ಹೊಂದಿರುವ ಗೌಟೆಂಗ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಇಲ್ಲಿ ಕೋವಿಡ್ ವೈರಸ್ ಉಲ್ಬಣಗೊಂಡಿದೆ.
ದಕ್ಷಿಣ ಆಫ್ರಿಕಾವನ್ನು ಕಾಡುತ್ತಿರುವ ಕೋವಿಡ್ನ ಹೊಸ ರೂಪಾಂತರವು ಎಲ್ಲಿಂದ ಸೃಷಿಯಾಯಿತು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೂ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಈ ಬಗ್ಗೆ ವಿಶ್ವಸಂಸ್ಥೆಯ ಗಮನ ಸೆಳೆದಿದ್ದಾರೆ,. ಇಸ್ರೇಲ್ ಹಾಗೂ ನೆದರ್ಲ್ಯಾಂಡ್ನಿಂದ ಆಗಮಿಸುವ ಪ್ರಯಾಣಿಕರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ ಎಂದು ನಂಬಲಾಗಿದೆ.
ದಕ್ಷಿಣ ಆಫ್ರಿಕಾದ ಸಂಶೋಧಕರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ವಿಶ್ವಸಂಸ್ಥೆ ಈ ಅಪಾಯಕಾರಿ ವೈರಸ್ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಬಗ್ಗೆ ಎಲ್ಲ ರಾಷ್ಟ್ರಗಳಿಗೆ ಎಚ್ಚರಿಕೆ ಕರೆ ಗಂಟೆ ಬಾರಿಸಿದೆ. ಅಲ್ಲದೇ ವಿಶ್ವಸಂಸ್ಥೆಯ ತಜ್ಞರು ಈ ಅಪಾಯಕಾರಿ ಕೋವಿಡ್ ಹೊಸ ರೂಪಾಂತರಕ್ಕೆ ಒಮಿಕ್ರೋನ್ ಎಂದು ಹೆಸರಿಟ್ಟಿದೆ.
ಒಮಿಕ್ರೋನ್ ಬಗ್ಗೆ ನಮಗೆಷ್ಟು ಗೊತ್ತು?
ಕಳೆದ ಕೆಲವು ದಿನಗಳಲ್ಲಿ ವಿಶ್ವದ ವಿವಿದೆಡೆ ಹೊಸ ರೂಪಾಂತರಿಯ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ಹೇಳಿದ್ದಾರೆ. ಇತ್ತೀಚಿನ ವಾರಗಳಲ್ಲಿ ದಿನಕ್ಕೆ ಕೇವಲ 200 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಗೌಟೆಂಗ್ ಪ್ರಾಂತ್ಯದಲ್ಲಿ ಈ ಪ್ರಕರಣಗಳ ಸಂಖ್ಯೆ ದಿನವೊಂದಕ್ಕೆ 3200ಕ್ಕೆ ಏರಿಕೆ ಆಗಿದೆ.
ಇದಕ್ಕಿದ್ದಂತೆ ಕೋವಿಡ್ನ ಹೊಸ ರೂಪಾಂತರಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದರಿಂದ ತಜ್ಞರು ಗಲಿಬಿಲಿಗೊಂಡಿದ್ದಾರೆ. ಈ ದಿಢೀರ್ ಏರಿಕೆಗೆ ಕಾರಣ ಏನು ಎಂಬ ಬಗ್ಗೆ ತಿಳಿದುಕೊಳ್ಳಲು ತಜ್ಞರು ಹೆಣಗಾಡುತ್ತಿದ್ದಾರೆ. ಈ ನಡುವೆ ತಲೆಕೆಡಿಸಿಕೊಂಡ ವೈದ್ಯರು, ಹೊಸ ರೂಪಾಂತರ ವೈರಸ್ನ ಅಪಾಯಕಾರಿ ಗುಣಲಕ್ಷಣಗಳನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಗಳ ಹಠಾತ್ ಏರಿಕೆಯನ್ನು ವಿವರಿಸಲು ಹೆಣಗಾಡುತ್ತಿರುವ ವಿಜ್ಞಾನಿಗಳು ವೈರಸ್ ಮಾದರಿಗಳನ್ನು ಅಧ್ಯಯನ ಮಾಡಿದರು ಮತ್ತು ಹೊಸ ರೂಪಾಂತರವನ್ನು ಕಂಡುಹಿಡಿದರು.