ಎಲ್ಲಡೆ ನಾಡ ಹಬ್ಬ ದಸರಾ ಸಂಭ್ರಮ. ಆಯುಧಪೂಜೆ ದಿನದಂದೇ ಸಿನಿಪ್ರಿಯರಿಗೆ ಸ್ಯಾಂಡಲ್ವುಡ್ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ದುನಿಯಾ ವಿಜಯ್ (Duniya Vijay) ಅಭಿನಯದ ಸಲಗ (Salaga)ಹಾಗೂ ಕಿಚ್ಚ ಸುದೀಪ್ (Kichcha Sudeep)ಅವರ ಕೋಟಿಗೊಬ್ಬ 3 ತೆರೆ ಕಂಡಿದೆ. ಕೊರೋನಾ ಲಾಕ್ಡೌನ್ ಸಡಿಲಗೊಂಡ ನಂತರ ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಿದ ನಂತರ ತೆರೆ ಕಾಣುತ್ತಿರುವ ಸಿನಿಮಾಗಳು ಇವಾಗಿದೆ.
ಅದರಲ್ಲೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ನೋಡಲು ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಗಳ ಬಳಿ ಸೇರಿದ್ದಾರೆ. ಎರಡೂವರೆ ವರ್ಷದಿಂದ ಸಿನಿಮಾಗಾಗಿ ಕಾಯ್ತಿರೋ ಕಿಚ್ಚನ ಅಭಿಮಾನಿಗಳು ಬೆಳಿಗ್ಗೆಯೇ ಮೊದಲ ಪ್ರದರ್ಶನಕ್ಕಾಗಿ ಕಾಯುತ್ತಾ ಕುಳಿತ್ತಿದ್ದರು. ಜೆ.ಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್ನಲ್ಲಿ ಮೊದಲ ಶೋ (Morning Show Cancel) ಆರಂಭವಾಗಬೇಕಿತ್ತು. ಆದರೆ ಆರಂಭದಲ್ಲೇ ಕಿಚ್ಚನ ಸಿನಿಮಾಗೆ ವಿಘ್ನ ಎದುರಾಗಿದೆ.
ಹೌದು, ಆಯುಧಪೂಜೆಯಂದು ಬೆಳಗಿನಂದಲೇ ಸಿನಿಮಾ ಪ್ರದರ್ಶನ ಇದೆ ಎಂದು ಟಿಕೆಟ್ಗಳನ್ನು ಮಾರಾಟ ಮಾಡಲಾಗಿತ್ತು. 6 ಗಂಟೆಗೆ ಇದ್ದ ಕೋಟಿಗೊಬ್ಬ 3 ಸಿನಿಮಾದ ಪ್ರದರ್ಶನವನ್ನು 7:30ಕ್ಕೆ ಮುಂದೂಡಲಾಗಿತ್ತು. 7:30 ಆದರೂ ಸಿನಿಮಾ ಪ್ರದರ್ಶನ ಆರಂಭವಾಗಲಿಲ್ಲ. ಇದರಿಂದಾಗಿ ಚಿತ್ರಮಂದಿರಗಳ ಬಳಿ ಸೇರಿದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ.