Never Drink Honey Water Like This: ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಅಥವಾ ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಅದನ್ನು ನಿಲ್ಲಿಸಿ ಎನ್ನುತ್ತಾರೆ ಆಯುರ್ವೇದ ತಜ್ಞರು..ನಿಮಗೇ ತಿಳಿಯದಂತೆ ಅದು ನಿಮ್ಮ ದೇಹದೊಳಗೆ ವಿಷವಾಗಿ ಬದಲಾಗಿ ನಾನಾ ಆರೋಗ್ಯ ಸಮಸ್ಯೆ ತಂದೊಡ್ಡುತ್ತದಂತೆ…
ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಅಥವಾ ಬೆಚ್ಚಗಿನ ನೀರಿಗೆ ಜೇನು ಬೆರೆಸಿ ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇದು ದೇಹತೂಕ ಇಳಿಸುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಅಲರ್ಜಿಗಳಿಂದ ದೂರ ಇರಲು ಸಹಕಾರಿ ಎನ್ನುವ ನಂಬಿಕೆ ಇದೆ.
ಆದರೆ ಜೇನುತುಪ್ಪವನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಬಾರದು ಎನ್ನುತ್ತಾರೆ. ಬಿಸಿನೀರಿಗೆ ಜೇನುತುಪ್ಪ ಬೆರೆಸಿದರೆ ಆಗ ಜೇನಿನಲ್ಲಿ ಇರುವ ಎಲ್ಲಾ ಉತ್ತಮ ಅಂಶಗಳೂ ನಾಶವಾಗಿಬಿಡುತ್ತವೆ. ಆದ್ದರಿಂದ ಕೆಲವರು ಉಗುರು ಬೆಚ್ಚಗಿನ ನೀರಿಗೆ ಜೇನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಆದರೆ ಇನ್ನು ಕೆಲವರು ಬಿಸಿ ಹಾಲಿಗೆ ಜೇನು ಸೇರಿಸಿ ಕುಡಿಯುತ್ತಾರೆ. ಜೇನನ್ನು ಬಿಸಿ ಮಾಡುವುದೇ ತಪ್ಪು ಎನ್ನುತ್ತಾರೆ ಆಯುರ್ವೇದ ತಜ್ಞರು.