5ನೇ ವಾರ್ಡ್ ಉಪ ಚುನಾವಣೆ ನಾಮಪತ್ರ ಪರಿಶೀಲನೆ

ಯಳಂದೂರು : ಪಟ್ಟಣ ಪಂಚಾಯಿತಿಯ 5ನೇ ವಾರ್ಡ್ ಉಪ ಚುನಾವಣೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಿತು.
ಪಟ್ಟಣ ಪಂಚಾಯಿತಿಯ ಐದನೇ ವಾರ್ಡಿನ ಸದಸ್ಯರಾಗಿದ್ದಕ್ಕೆy ಮಲ್ಲಯ್ಯನವರು ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಉಪಚುನಾವಣೆಗೆ ಇಬ್ಬರು ನಾಮಪತ್ರ ಸಲ್ಲಿಸಿದ್ದು ಮಂಗಳವಾರ ನಾಮಪತ್ರ ಪರಿಶೀಲನೆ ನಡೆಸಲಾಯಿತು,
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳಾದ ಚುನಾವಣಾಧಿಕಾರಿಗಳಾದ ಆರ್. ನಂಜುಂಡಯ್ಯ, ಶಿವಲಂಕರ್ ರವರು ಮಾತನಾಡಿ ನಾಮಪತ್ರ ಪರಿಶೀಲನೆ ಮಾಡಲಾಗಿದ್ದು ನಾಮಪತ್ರಗಳು ಸ್ವೀಕೃತವಾಗಿವೆ ಯಾವುದೇ ರೀತಿಯ ದೋಷವಿಲ್ಲ ನಂಬರ್ 14ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ನಾಮಪತ್ರ ವಾಪಸ್ ಪಡೆಯದಿದ್ದರೆ ನವಂಬರ್ 23 ರಂದು ಚುನಾವಣೆ ನಿಗದಿಯಾಗಿದ್ದು,
ಅಭ್ಯರ್ಥಿಗಳು ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಶಶಿಧರ ಮಹದೇವ ಹಾಗೂ ಚುನಾವಣಾ ಏಜೆಂಟರಗಳು ಹಾಜರಿದ್ದರು.
ವರದಿ. : ಎಸ್. ಪುಟ್ಟಸ್ವಾಮಿಹೊನ್ನೂರು tv8kannada
.