ಬಹುಭಾಷಾ ನಟಿ ಜ್ಯೋತಿಕಾ ( Jyotika) ಮತ್ತೊಂದು ಹೊಸ ಚಿತ್ರದ ಜೊತೆ ತಮ್ಮ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ಚಿತ್ರ ಅವರ ಪಾಲಿಗೆ ತುಂಬಾ ವಿಶೇಷ. ಜ್ಯೋತಿಕಾ ತಮ್ಮ ಮುಂದಿನ ಚಿತ್ರ ಉದನ್ಪಿರಪ್ಪೆ (Udanpirappe) ಸಿನಿಮಾದಲ್ಲಿ ಹಳ್ಳಿ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರು ತಮ್ಮ ವೃತ್ತಿ ಜೀವನದಲ್ಲಿ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
ಈ ಪಾತ್ರ, ತಮ್ಮ ಅತ್ತೆ ಮತ್ತು ಇಂದಿಗೂ ತಮ್ಮ ಹಳ್ಳಿಗಳಲ್ಲಿ ಬದುಕುತ್ತಿರುವ ಪತಿ ಸೂರ್ಯ ಅವರ ಪೂರ್ವಜರರಿಂದ ಪ್ರೇರಣೆ ಪಡೆದಿರುವುದಾಗಿದೆ ಎಂದು ಹೇಳಿಕೊಂಡಿದ್ದಾರೆ ಜ್ಯೋತಿಕಾ.
“ಈ ಪಾತ್ರಕ್ಕಾಗಿ ತಯಾರಿ ನಡೆಸುವಾಗ, ನಾನು ನಿಜ ಜೀವನದ ಹಲವಾರು ಪಾತ್ರಗಳನ್ನು ಮಾದರಿಯಾಗಿ ತೆಗೆದುಕೊಂಡಿದ್ದೇನೆ. ನಮ್ಮ ಮನೆಯಲ್ಲಿ ಅತ್ತೆ ಮತ್ತು ಮದುವೆಯಾದ 15 ವರ್ಷಗಳಿಂದ ನನಗೆ ಗೊತ್ತಿರುವ ಹಲವಾರು ಮಹಿಳೆಯರು ನನ್ನ ಸ್ಪೂರ್ತಿ. ನನ್ನ ಪತಿಯ ಇಡೀ ಕುಟುಂಬ ಕೊಯಮತ್ತೂರಿನ ಸುತ್ತಮುತ್ತಲಿನ ಸಣ್ಣ ಹಳ್ಳಿಗಳಿಗೆ ಸೇರಿದ್ದು. ಕುಟುಂಬದ ಎಲ್ಲ ಮಹಿಳೆಯರ ಜೊತೆಗೆ ಮಾತನಾಡುವ ಸಂದರ್ಭಗಳಲ್ಲಿ, ನಾನು ಹಲವಾರು ವಿಷಯಗಳನ್ನು ಪಡೆದುಕೊಂಡಿದ್ದೇನೆ” ಎಂದು ಜ್ಯೋತಿಕಾ ಹೇಳಿದ್ದಾರೆ.