ರಾಜ್ಯಸುದ್ದಿ

ಹಾವಿನಿಂದ ಹೆಂಡತಿಯನ್ನು ಕಚ್ಚಿಸಿ ಕೊಲೆ ಮಾಡಿದ್ದ ಗಂಡನಿಗೆ ಇಂದು ಶಿಕ್ಷೆ ಪ್ರಕಟ..!

ಕಳೆದ ವರ್ಷ ನಾಗರಹಾವ(Cobra)ನ್ನು ಬಳಸಿ ಪತಿಯು(Husband) ತನ್ನ ಪತ್ನಿ(Wife)ಯನ್ನು ಕೊಲೆ(Murder)ಗೈದ ಪ್ರಕರಣವೊಂದು ಕೇರಳ(Kerala)ದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಇದೀಗ ಈ ಪ್ರಕರಣದಲ್ಲಿ ಮೃತಪಟ್ಟ ಉತ್ತರಾ(Uthra Murder)ಅವರ ಪತಿಗೆ ಕೊಲ್ಲಂ(Kollam)ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿಸಿದ್ದು, ಆತನಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಉತ್ತರಾ ಅವರ ಪತಿ ಸೂರಜ್ ಅವರು ಮೇ 7, 2020 ರಂದು ನಾಗರ ಹಾವನ್ನು ಬಳಸಿ ಆಕೆಯನ್ನು ಕೊಂದಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಕೊಲ್ಲಂನಲ್ಲಿರುವ ಆಕೆಯ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದರು. ಪ್ರಾಸಿಕ್ಯೂಷನ್ ಪ್ರಕಾರ, ಸೂರಜ್ ಅವರ ಮನೆಯಲ್ಲಿ ಈ ಹಿಂದೆ ಸಹ ಉತ್ತರಾಗೆ ಹಾವು ಕಚ್ಚಿದ್ದು, ಆಕೆ ಒಟ್ಟು ಎರಡು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರಿ ವಕೀಲರಾದ ಜಿ. ಮೋಹನ್ ರಾಜ್ ಅವರು ತಿಳಿಸಿರುವಂತೆ, ಉತ್ತರಾ ವಿಕಲಚೇತನರಾಗಿದ್ದು, ಮದುವೆಯ ಸಂದರ್ಭದಲ್ಲಿ ಚಿನ್ನ, 4 ಲಕ್ಷ ರೂಪಾಯಿ ಮತ್ತು ಒಂದು ಕಾರನ್ನು ಸೂರಜ್‌ಗೆ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು ಎಂದು ತಿಳಿಸಿದರು. ಉತ್ತರಾ ಅವರ ತಂದೆ ಕೂಡ ಪ್ರತಿ ತಿಂಗಳು ಸುಮಾರು 8000 ರೂಪಾಯಿಗಳನ್ನು ನೀಡುತ್ತಿದ್ದರು. ಸೂರಜ್ ಈ ಎಲ್ಲಾ ಹಣವನ್ನು ತಾನೇ ಪಡೆಯಬೇಕೆಂದು ಈ ಅಪರಾಧವನ್ನು ಎಸಗಿದ್ದಾನೆ ಎಂದು ಪ್ರಾಸಿಕ್ಯೂಷನ್ ವಾದವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button