ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(Indian Space Research Organisation-ISRO)ಯ ಘಟಕವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್(IIRS) ಖಾಲಿ ಇರುವ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು IIRSನ ಅಧಿಕೃತ ವೆಬ್ಸೈಟ್ iirs.gov.in.ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಖಾಲಿ ಇರುವ 16 ಜೆಆರ್ಎಫ್(Junior Research Fellow-JRF) ಹುದ್ದೆಗಳನ್ನು ಭರ್ತಿ ಮಾಡಲು IIRS ಅರ್ಜಿ ಆಹ್ವಾನಿಸಿದೆ. ಯಾವುದೇ ಪರೀಕ್ಷೆ ಇರುವುದಿಲ್ಲ. ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಅಕ್ಟೋಬರ್ 22ರಿಂದ ಅಕ್ಟೋಬರ್ 29ರವರೆಗೆ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
JRF-66, JRF-68, JRF-70, JRF-71: ಅಕ್ಟೋಬರ್ 22, 2201
JRF-67: ಅಕ್ಟೋಬರ್ 25-26, 2021
JRF-69 & JRF-74: ಅಕ್ಟೋಬರ್ 27, 2021
JRF-72 & JRE-73: ಅಕ್ಟೋಬರ್ 28, 2021
JRF-76 & JRF-75: ಅಕ್ಟೋಬರ್ 29, 2021
ಸ್ಥಳ: IIRS ಸೆಕ್ಯುರಿಟಿ ರಿಸೆಪ್ಶನ್, IIRs ISRO/DOS, 4 ಕಾಳಿದಾಸ ರಸ್ತೆ, ಡೆಹ್ರಾಡೂನ್- 248001
ರಿಪೋರ್ಟಿಂಗ್ ಸಮಯ: ಬೆಳಗ್ಗೆ 8.30
ಹುದ್ದೆಗಳ ಮಾಹಿತಿ
JRF 66: 1
JRF 67: 4
JRF 68: 1
JRF 69: 2
JRF 70: 1
JRF 71: 1
JRF 72: 1
JRF 73: 1
JRF 74: 1
JRF 75: 1
JRF 76: 2
ಆಯ್ಕೆ ಪ್ರಕ್ರಿಯೆ:
ವಾಕ್-ಇನ್ ಇಂಟರ್ವ್ಯೂ ದಿನಾಂಕದಂದು, ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ/ಪದವಿ, ಜಾತಿ ಪ್ರಮಾಣ ಪತ್ರಗಳು, NOC ಇತ್ಯಾದಿ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಆಯ್ಕೆ ಸಮಿತಿಯು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಸಂದರ್ಶನದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಂದರ್ಶನದ ದಿನಾಂಕದಂದು ತಮ್ಮ ಎಲ್ಲಾ ಶೈಕ್ಷಣಿಕ ಅರ್ಹತಾ ಅಂಕಪಟ್ಟಿಗಳು/ ಪದವಿ ಪ್ರಮಾಣಪತ್ರಗಳು ಇತ್ಯಾದಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ತರಬೇಕು