ಬಾಲಿವುಡ್ನಲ್ಲಿ ಬಿಗ್-ಬಿ ಎಂದೇ ಖ್ಯಾತರಾಗಿರುವ ನಟ ಅಮಿತಾಭ್ ಬಚ್ಚನ್ (Happy Birthday Amitabh Bachchan) ಅವರ ಹುಟ್ಟುಹಬ್ಬವಿಂದು. 79ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 1942ರ ಅಕ್ಟೋಬರ್ 11ರಂದು ಅಲಹಾಬಾದ್ನಲ್ಲಿ ಆಗಿತ್ತು. ಈ ಇಳಿವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಅವರು ತುಂಬಾ ಉತ್ಸಾಹದಿಂದ ಇರುತ್ತಾರೆ. ಅವರ ಫಿಟ್ನೆಸ್ ನೋಡಿದರೆ, ಅವರಿಗೆ ಇಷ್ಟು ವಯಸ್ಸಾಗಿದೆ ಎಂದು ಅಂದಾಜಿಸಲು ಆಗುವುದಿಲ್ಲ.
ಇವರ ವಯಸ್ಸಿನವರು ಮನೆಯಲ್ಲಿ ಆರಾಮಾಗಿ ಕಾಲ ಕಳೆಯುತ್ತಿರುತ್ತಾರೆ. ಆದರೆ, ಈ ವಯಸ್ಸಿನಲ್ಲೂ ಅಮಿತಾಭ್ ಬಚ್ಚನ್ ಅವರು ಸಾಲು ಸಾಲು ಸಿನಿಮಾಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿರುತ್ತಾರೆ. ಈಗಲೂ ಅವರು ದಿನದಲ್ಲಿ 16 ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿಯೇ ಈಗಲೂ ಇವರು ಯುವ ನಟನರಿಗೆ ಮಾದರಿ ಹಾಗೂ ಸ್ಫೂರ್ತಿ ಎಂದರೆ ತಪ್ಪಾಗದು.
ಈಗಲೂ ಸಹ ಅಮಿತಾಭ್ ಬಚ್ಚನ್ ಅವರ ಕೈಯಲ್ಲಿ ಸಿನಿಮಾಗಳ ಜತೆಗೆ ಜಾಹೀರಾತುಗಳೂ ಸಹ ಇವೆ. ಹೊಸ ಹಾಗೂ ದಿಗ್ಗಜದ ನಿರ್ದೇಶಕರ ಜೊತೆ ಕೆಲಸ ಮಾಡುತ್ತಾರೆ. ಇಂತಹ ನಟನ ಆರೋಗ್ಯ (Health) ಹಾಗೂ ಫಿಟ್ನೆಸ್ (Fitness) ವಿಷಯಕ್ಕೆ ಬಂದರೆ, ತುಂಬಾ ಜನರಿಗೆ ಅವರ ಆರೋಗ್ಯದ ಗುಟ್ಟಿನ ಬಗ್ಗೆ ತಿಳಿಯುವ ಕಾತರವಿದೆ. ಅವರ ಹುಟ್ಟುಹಬ್ಬದಂದು ನಟನ ಫಿಟ್ನೆಸ್ ಸೀಕ್ರೆಟ್ ಅನ್ನು ನಿಮಗಾಗಿ ತಂದಿದ್ದೇವೆ.