ಸ್ಥಳೀಯ ಬಾಹ್ಯಾಕಾಶ ಸಂಬಂಧಿತ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಘ (Indian Space Association-ISPA) ವನ್ನು ಆರಂಭಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋದಿ ಬಾಹ್ಯಾಕಾಶ ಕ್ಷೇತ್ರದ ಉದ್ಯಮಿಗಳ ಜತೆ ಸಂವಾದ ನಡೆಸಲಿದ್ದಾರೆ. ಈ
ಸಂಬಂಧ ಅಧಿಕೃತ ಹೇಳಿಕೆ ನೀಡಿದ ಪ್ರಧಾನ ಮಂತ್ರಿಗಳ ಕಚೇರಿ (PMO), ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತಾ, ISPA ಭಾರತವನ್ನು ಸ್ವಾವಲಂಬಿ, ತಾಂತ್ರಿಕವಾಗಿ ಮುಂದುವರಿಸಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯ ಆಟಗಾರನಾಗಲು ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಸೋಮವಾರ ಐಎಸ್‌ಪಿಎ ಉದ್ಘಾಟನೆಯಲ್ಲಿ ಭಾಗವಹಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಘೋಷಿಸಿದರು. “ನಾಳೆ, ಅಕ್ಟೋಬರ್ 11, ಬೆಳಗ್ಗೆ 11 ಗಂಟೆಗೆ, ನಾನು ಭಾರತೀಯ ಬಾಹ್ಯಾಕಾಶ ಸಂಘವನ್ನು ಪ್ರಾರಂಭಿಸುವ ಕಾರ್ಯಕ್ರಮಕ್ಕೆ ಸೇರುತ್ತೇನೆ. ಕ್ಷೇತ್ರದ ಪ್ರಮುಖ ಪಾಲುದಾರರೊಂದಿಗೆ ಸಂವಹನ ನಡೆಸಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಬಾಹ್ಯಾಕಾಶ ಮತ್ತು ನಾವೀನ್ಯತೆಯ ಜಗತ್ತಿನಲ್ಲಿ ಆಸಕ್ತಿಯುಳ್ಳವರು ನಾಳಿನ ಕಾರ್ಯಕ್ರಮವನ್ನು ನೋಡಬೇಕು” ಎಂದು ಮೋದಿ ಭಾನುವಾರ ಟ್ವೀಟ್ ಮಾಡಿದ್ದರು.