ಬೆಂಗಳೂರು ಗ್ರಾಮಾಂತರ(ಅ.11): ಮಕ್ಕಳನ್ನ ಬೆಳಗ್ಗೆ ಸಮಯ ವಾಕಿಂಗ್(Walking) ಕಳುಹಿಸೋಕು ಈಗ ನಗರ ನಿವಾಸಿಗಳು ಯೋಚಿಸುವಂತಾಗಿದೆ. ಬೆಳಗ್ಗೆ ವಾಕಿಂಗ್ ಹೋಗಿ ಬರ್ತಿವಿ ಎಂದು ಮನೆಯಿಂದ ಹೊರಟಿದ್ದ 7 ಮಕ್ಕಳು(Children Missing) ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 7 ಜನ ಮಕ್ಕಳು ನಾಪತ್ತೆಯಾಗಿದ್ದು ಇಡೀ ಬೆಂಗಳೂರಿಗೆ ಬೆಂಗಳೂರೆ ಬೆಚ್ಚಿಬೀಳುವಂತಾಗಿದೆ. ಸೋಲದೇವನಹಳ್ಳಿ ಠಾಣ ವ್ಯಾಪ್ತಿಯ ಎಜಿಬಿ ಲೇಔಟ್‌ನಲ್ಲಿನ ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ ನಿವಾಸಿಗಳಾದ 12 ವರ್ಷದ ರಾಯನ್, 12 ವರ್ಷದ ಭೂಮಿ, 14 ವರ್ಷದ ಚಿಂತನ್ ಹಾಗೂ 21 ವರ್ಷದ ವರ್ಷಿಣಿ ಇಂದು ಮುಂಜಾನೆ ನಾಪತ್ತೆಯಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳಾದ 15 ವರ್ಷದ ಪರೀಕ್ಷೀತ್, ಕಿರಣ್, ನಂದನ್ ನೆನ್ನೆ ಮುಂಜಾನೆ ನಿಗೂಡವಾಗಿ ನಾಪತ್ತೆಯಾಗಿದ್ದಾರೆ.
ಇನ್ನೂ ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ ನಿವಾಸಿಗಳಾದ ನಾಲ್ಕು ಜನರು ಸದಾ ಕಾಲ ಜೊತೆಯಲ್ಲಿಯೇ ಇರುತ್ತಿದ್ದು, ವರ್ಷಿಣಿ ಪಿಯು ವ್ಯಾಸಂಗ ಮಾಡುತ್ತಿದ್ದರೆ ಉಳಿದ ಮೂರು ಮಕ್ಕಳು ಪ್ರಾಥಮಿಕ ಶಾಲಾ ಹಂತದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸದಾ ಕಾಲ ಒಟ್ಟಿಗೆ ಕಳೆಯುತ್ತಿದ್ದ ನಾಲ್ಕು ಜನ ಜೊತೆಯಲ್ಲಿಯೇ ಆಡಿ ನಲಿಯುತ್ತಿದ್ದರು. ಇಂದು ಮುಂಜಾನೆ ವಾಕಿಂಗ್ ಹೋಗಿದ್ದ ಈ ಮೂವರು ಮತ್ತೆ ವಾಪಸ್ ಮನೆಗೆ ಬಂದೆ ಇಲ್ಲ, ನಾಲ್ಕು ಜನದ ನಾಪತ್ತೆ ಕುರಿತಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ತನಿಖೆಗೆ ಮುಂದಾಗಿದ್ದಾರೆ.