ಸೀತಾರಾಮ ಕಲ್ಯಾಣ ಚಿತ್ರದ ನಂತರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಭಿನಯಿಸುತ್ತಿರುವ ಸಿನಿಮಾ ರೈಡರ್ (Rider). ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ರೈಡರ್ ಸಿನಿಮಾ ಈಗ ರಿಲೀಸ್ಗೆ ರೆಡಿಯಾಗಿದೆ. ಹೀಗಿರುವಾಗಲೇ ಚಿತ್ರತಂಡ ವಿಡಿಯೋ ಹಾಡಿನ ರಿಲೀಸ್ ದಿನಾಂಕ ಪ್ರಕಟಿಸಿದೆ. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಂ ಖಾತೆ)
ಸೀತಾರಾಮ ಕಲ್ಯಾಣ ಚಿತ್ರದ ಮೂಲಕ ಲವರ್ ಬಾಯ್ ಆಗಿ ಸ್ಯಾಂಡಲ್ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ ಈಗ ಮತ್ತೆ ಅಂತಹದ್ದೇ ಪಾತ್ರದಲ್ಲಿ ರೈಡರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೀತಾರಾಮ ಕಲ್ಯಾಣ ಚಿತ್ರದ ನಂತರ ನಿಖಿಲ್ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಈ ಕಾರಣದಿಂದ ಅವರ ಯಾವುದೇ ಸಿನಿಮಾಗಳು ಸೆಟ್ಟೇರಿರಲಿಲ್ಲ. ನಂತರ ಕಳೆದ ದೀಪಾವಳಿ ಹಬ್ಬದ ಸಮಯದಲ್ಲಿ ರೈಡರ್ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ತಮ್ಮ ಹೊಸ ಸಿನಿಮಾದ ಪ್ರಕಟಣೆ ಮಾಡಿದ್ದರು.